ಮೈಸೂರು, ನ.೧೮,೨೦೨೫ : ನಗರದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕ ದ್ವಿಚಕ್ರ ವಾಹನ ಚಾಲನೆ ಮಾಡಿದ ಪ್ರಕರಣದಲ್ಲಿ ಟ್ರಾಫಿಕ್ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಬಾಲಕನಿಗೆ ಚಾಲನೆಗೆ ಅನುಮತಿ ಇಲ್ಲದಿದ್ದರೂ ಬೈಕ್ ಓಡಿಸುತ್ತಿದ್ದುದ್ದನ್ನು ಪತ್ತೆಹಚ್ಚಿದ ಪೊಲೀಸರು, ವಾಹನ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ ರೂ. 25,000 ದಂಡ ವಿಧಿಸಿದ್ದಾರೆ.
ಘಟನೆ ಮೈಸೂರಿನ ವಿಜಯನಗರದಬಸವನಹಳ್ಳಿ ಸಮೀಪದ ರಿಂಗ್ ರಸ್ತೆ ಬಳಿ ನಡೆದಿದೆ. ಕಳೆದ ಮೂರುದಿನಗಳ ಹಿಂದೆ, ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ವಿವಿಪುರಂ ಸಂಚಾರಿ ಠಾಣೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಬಾಲಕ. ಟ್ರಾಫಿಕ್ ಪೊಲೀಸರು ಹೆಲ್ಮೆಟ್ ಇಲ್ಲದೆ, ನಿಯಮ ಉಲ್ಲಂಘನೆ ಮಾಡಿಕೊಂಡು ಬೈಕ್ ಓಡಿಸುತ್ತಿದ್ದ ಬಾಲಕನನ್ನು ತಡೆದು ವಿಚಾರಣೆ ನಡೆಸಿದಾಗ, ಅವನು 18 ವರ್ಷ ಪೂರೈಸಿಲ್ಲ ಎನ್ನುವುದು ಸ್ಪಷ್ಟವಾಗಿದೆ.

ಪೊಲೀಸರ ಮಾಹಿತಿ ಪ್ರಕಾರ:
ಬಾಲಕ ಅಪ್ರಾಪ್ತ ವಯಸ್ಸಿನವನಾಗಿರುವುದರಿಂದ ಮೋಟಾರು ವಾಹನ ಕಾಯ್ದೆ ಪ್ರಕಾರ ಗಂಭೀರ ಉಲ್ಲಂಘನೆ. ವಾಹನ ಮಾಲೀಕರಿಗೆ ರೂ. 25,000 ದಂಡ. ವಾಹನವನ್ನು ತಾತ್ಕಾಲಿಕವಾಗಿ ಜಪ್ತಿ. ಪೋಷಕರಿಗೆ ಕಾನೂನುಬದ್ಧ ಎಚ್ಚರಿಕೆ
ಇತ್ತೀಚಿನ ದಿನಗಳಲ್ಲಿ ಮೈಸೂರಿನಲ್ಲಿ ಅಪ್ರಾಪ್ತರು ಬೈಕ್ ಮತ್ತು ಕಾರು ಚಾಲನೆ ಮಾಡುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟ್ರಾಫಿಕ್ ಇಲಾಖೆ ವಿಶೇಷ ನಿಗಾವಹಿಸಿದೆ. ಸಾರ್ವಜನಿಕರು ತಮ್ಮ ಮಕ್ಕಳು ವಾಹನ ಚಾಲನೆ ಮಾಡದಂತೆ ಜಾಗರೂಕತೆಯಿಂದ ಇರಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.
key words: Mysore, Minor boy, driving a bike, Police fine. Rs. 25 thousand.

SUMMARY:
Mysore: Minor boy driving a bike: Police fine him Rs. 25 thousand.

The traffic police have taken strict action in the case of a minor boy driving a two-wheeler in the city. The police, who discovered that the boy was riding the bike even though he did not have a driving license, have registered a case against the vehicle owner and imposed a fine of Rs. 25,000.






