Sunday, August 30, 2026

BDA Apartments

Home Front Page ಮಂತ್ರಿಗಿರಿಗಾಗಿ ಲಾಬಿ: ಸಿದ್ದರಾಮಯ್ಯರನ್ನ ಭೇಟಿಯಾದ ಸಚಿವಾಕಾಂಕ್ಷಿಗಳು

ಮಂತ್ರಿಗಿರಿಗಾಗಿ ಲಾಬಿ: ಸಿದ್ದರಾಮಯ್ಯರನ್ನ ಭೇಟಿಯಾದ ಸಚಿವಾಕಾಂಕ್ಷಿಗಳು

ಬೆಂಗಳೂರು,ಮೇ,30,2026 (www.justkannada.in):  ರಾಜ್ಯದಲ್ಲಿ ಸಿಎಂ ಬದಲಾವಣೆಯ ಗೊಂದಲ ಬಗೆಹರಿದಿದ್ದು ಇಂದು ನಡೆಯುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಡೆಯಲಿದೆ.

ಈ ನಡುವೆ ಡಿಕೆ ಶಿವಕುಮಾರ್ ಮುಂದಿನ ಸಿಎಂ ಆಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದ್ದು,  ಹೊಸ ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಶಾಸಕರು ತೀವ್ರ ಕಸರತ್ತು ನಡೆಸುತ್ತಿದ್ದಾರೆ.  ಇದೀಗ ಶಾಸಕರು, ಸಚಿವಾಕಾಂಕ್ಷಿಗಳು ಸಿದ್ದರಾಮಯ್ಯ ಅವರನ್ನ  ಭೇಟಿ ಮಾಡಿದ್ದಾರೆ.

ಶಾಸಕರಾದ ಜಮೀರ್ ಅಹ್ಮದ್ ಖಾನ್,  ಕೆ.ಜೆ ಜಾರ್ಜ್,  ಪೊನ್ನಣ್ಣ, ಬಲ್ಕೀಸ್ ಬಾನು,  ಪುಟ್ಟರಂಗಶೇಟ್ಟಿ ಸೇರಿ ಹಲವರು ಸಿದ್ದರಾಮಯ್ಯರನ್ನು ಭೇಟಿಯಾಗಿ ಚರ್ಚಿಸುತ್ತಿದ್ದಾರೆ ಎನ್ನಲಾಗಿದೆ.

Key words: ministerial post,  MLAs,  meet , Siddaramaiah