Wednesday, August 19, 2026

BDA Apartments

Home Front Page ಸಚಿವ ಸ್ಥಾನಕ್ಕೆ ನಾನು ಯಾಕೆ ರಾಜೀನಾಮೆ ಕೊಡಬೇಕು? ಬಿಜೆಪಿಗೆ ಬಿ.ನಾಗೇಂದ್ರ ತಿರುಗೇಟು

ಸಚಿವ ಸ್ಥಾನಕ್ಕೆ ನಾನು ಯಾಕೆ ರಾಜೀನಾಮೆ ಕೊಡಬೇಕು? ಬಿಜೆಪಿಗೆ ಬಿ.ನಾಗೇಂದ್ರ ತಿರುಗೇಟು

ಬೆಂಗಳೂರು,ಆಗಸ್ಟ್,19,2026 (www.justkannada.in):  ವಾಲ್ಮೀಕಿ ನಿಗಮದಲ್ಲಿ ಆದ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಪ್ರತಿ ಭಟನೆ ನಡೆಸುತ್ತಿರುವ ಬಿಜೆಪಿಗೆ ಸಾಂಖ್ಯಿಕ ಮತ್ತು ಯೋಜನೆ ಇಲಾಖೆ ಸಚಿವ ಬಿ. ನಾಗೇಂದ್ರ ತಿರುಗೇಟು ನೀಡಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಬಿ.ನಾಗೇಂದ್ರ, ವಿಪಕ್ಷದನಾಯಕರು ಗೊಂದಲ ಕ್ರಿಯೆಟ್ ಮಾಡುತ್ತಿದ್ದಾರೆ.   ಸಚಿವ ಸ್ಥಾನಕ್ಕೆ ನಾನು ಯಾಕೆ ರಾಜೀನಾಮೆ ನೀಡಬೇಕು. ಸಂವಿಧಾನ ನನ್ನ ರಕ್ಷಣೆ ಮಾಡುತ್ತಿದೆ.  ಒಂದು ಸುಳ್ಳನ್ನು ನೂರು ಬಾರಿ ಹೇಳಿ ಸತ್ಯ ಮಾಡಲು ಹೊರಟಿದ್ದಾರೆ.  ವಾಲ್ಮೀಕಿ ಸಮುದಾಯ ಇದನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದೆ.  ದಲಿತ ವ್ಯಕ್ತಿಯನ್ನು ಕಟ್ಟಿ ಹಾಕಲು ಮನುವಾದಿಗಳ ಏನ್ ಮಾಡುತ್ತಿದ್ದಾರೆ. ವಾಲ್ಮೀಕಿ ಸಮುದಾಯ ವಿಪಕ್ಷಗಳ ಹುನ್ನಾರವನ್ನು ಸೂಕ್ಷ್ಮವಾಗಿ ನೋಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಸದನದಲ್ಲಿ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲು ನಿರ್ಧರಿಸಿದ್ದೆ. ಸದನದಲ್ಲಿ ವಿಪಕ್ಷದವರು ನನ್ನ ರಾಜೀನಾಮೆ ಕೇಳುತ್ತಾರೆ. ಸದನದ ಬಾವಿಗೂ ಇಳಿಯುತ್ತಿಲ್ಲ. ಅವರ ಸ್ಥಾನದಲ್ಲೇ ಗಲಾಟೆ ಮಾಡುತ್ತಿದ್ದಾರೆ.  ಮುಖ್ಯವಾಗಿ ನನ್ನ ಸಮುದಾಯದ ಜನರಿಗೆ ಮಾಹಿತಿ ನೀಡಬೇಕು. ವಾಲ್ಮೀಕಿ ಬಗ್ಗೆ ಬಿಜೆಪಿ ಘೋಷಣೆ ಕೂಗಿದ್ದು ನೋಡಿದರೇ ನೋವಾಗುತ್ತೆ. ಚರ್ಚೆಗೆ ಬನ್ನಿ ಅಂತಾ ನಾವು ಹೇಳಿದರೂ ಕೂಡ ಚರ್ಚೆಗೆ ಬರುತ್ತಿಲ್ಲ ಎಂದು ಕಿಡಿಕಾರಿದರು.

Key words: Why resign, ministerial post, B. Nagendra , BJP