ಸಿದ್ದರಾಮಯ್ಯರನ್ನ ಬದಲಾಯಿಸಲು ಯಾರಿಗೆ ಗಟ್ಸ್ ಇದೆ? ಸಚಿವ ಜಮೀರ್ ಅಹ್ಮದ್ ಖಾನ್

ಬೆಳಗಾವಿ,ಡಿಸೆಂಬರ್,11,2025 (www.justkannada.in):  ಸಿಎಂ ಬದಲಾವಣೆ ಯಾರಿಂದಲೂ ಸಾಧ್ಯವಿಲ್ಲ ಸಿದ್ದರಾಮಯ್ಯ ಬದಲಾಯಿಸಲು ಯಾರಿಗೆ ಗಸ್ಟ್ ಇದೆ? ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ನುಡಿದರು.

ಈ ಕುರಿತು ಮಾತನಾಡಿದ  ಸಚಿವ ಜಮೀರ್ ಅಹಮ್ಮದ್ ಖಾನ್ ಪ್ರತಿಕ್ರಿಯಿಸಿ ಸಿದ್ದರಾಮಯ್ಯ ಬದಲಾವಣೆ ಯಾರಿಂದಲೂ ಸಾಧ್ಯವಿಲ್ಲ. 2028ರವರೆಗೂ ಸಿದ್ದರಾಮಯ್ಯನವರು ಸಿಎಂ ಅಗಿರಬೇಕು. ಇದು ನನ್ನ ವೈಯಕ್ತಿಕ ಹೇಳಿಕೆ. ಸಿದ್ದರಾಮಯ್ಯ ಬದಲಾಯಿಸಲು ಯಾರಿಗೆ ಗಟ್ಸ್ ಇದೆ? ಆ ಗಟ್ಸ್ ಇರುವುದು ಪಕ್ಷದ ಹೈಕಮಾಂಡ್​ ಗೆ ಮಾತ್ರ ಎಂದರು.

ನಾಯಕತ್ವ ಬದಲಾವಣೆ ಇಲ್ಲ ಎಂಬ ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಚಿವ ಜಮೀರ್ ಅಹ್ಮದ್ ಖಾನ್, ಯತೀಂದ್ರ ಸಿದ್ದರಾಮಯ್ಯ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ ಎಂದರು.

Key words: CM, Change, Minister, Zameer Ahmed Khan