ಸಿದ್ದರಾಮಯ್ಯನವರೇ  ಸಿಎಂ: ಸದ್ಯಕ್ಕೆ ಸಿಎಂ ಖುರ್ಚಿ ಖಾಲಿ ಇಲ್ಲ- ಸಚಿವ ಜಮೀರ್ ಆಹ್ಮದ್‌ ಖಾನ್

ಬೆಂಗಳೂರು,ನವೆಂಬರ್,27,2025 (www.justkannada.in):  ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಖುರ್ಚಿ ಖಾಲಿ ಇಲ್ಲ. ಸಿದ್ದರಾಮಯ್ಯನವರೇ ಸಿಎಂ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್,   ಸಿದ್ದರಾಮಯ್ಯ ಅವರೇ ಐದು ವರ್ಷಗಳ ಕಾಲ ಸಿಎಂ.  ಅಲ್ಲದೆ ಹೈಕಮಾಂಡ್ ಏನೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.

ಮಲ್ಲಿಕಾರ್ಜುನ ಖರ್ಗೆ ನಮ್ಮ ನಾಯಕರು ಎಐಸಿಸಿ ಅಧ್ಯಕ್ಷರು. ಅವರು ಹೇಳಿದ್ದನ್ನ ನಾನು ಗಮನಿಸಿದ್ದೇನೆ ಅವರು ಕರೆದು ಮಾತನಾಡುತ್ತೇನೆ ಅಂತ ಹೇಳಿದ್ದಾರೆ.  ಹಾಗಾಗಿ ಸಿಎಂ ಹಾಗೂ ಡಿಸಿಎಂ ಅವರನ್ನು ಕರೆದು ಮಾತನಾಡುತ್ತಾರೆ. ಹೈಕಮಾಂಡ್ ಏನೇ ತೀರ್ಮಾನ ಮಾಡಿದರು ಅದಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ ಎಂದರು.

Key words: Siddaramaiah, CM, not vacant, Minister, Zameer Ahmed Khan