2028ರವರೆಗೂ ಸಿದ್ದರಾಮಯ್ಯ ಸಿಎಂ: ನವೆಂಬರ್ ಕ್ರಾಂತಿ ಬಿಜೆಪಿಯ ಊಹೆಯಷ್ಟೆ- ಸಚಿವ ಜಮೀರ್ ಅಹ್ಮದ್ ಖಾನ್

ಚಿತ್ರದುರ್ಗ, ಅಕ್ಟೋಬರ್,31,2025 (www.justkannada.in):   2028ರವರೆಗೂ ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆ. ನವೆಂಬರ್ ಕ್ರಾಂತಿ ಬಿಜೆಪಿಯ ಊಹೆಯಷ್ಟೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.

ಇಂದು ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್,  ನವೆಂಬರ್ ಕ್ರಾಂತಿ ಏನು ಇಲ್ಲ ಎಲ್ಲವೂ ಬಿಜೆಪಿ ಊಹೆ.  ಬಿಜೆಪಿ ಐದು ಗುಂಪುಗಳಿವೆ ನೋಡಿಕೊಳ್ಳಲಿ.  ಕರ್ನಾಟಕದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ  ಸಂಪುಟ ಪುನಾರಚನೆ ಚಿಂತನೆ ಇದೆ. ಅದನ್ನ ವರಿಷ್ಠರು ತೀರ್ಮಾನಿಸುತ್ತಾರೆ ಎಂದರು.

ಡಿಕೆ ಶಿವಕುಮಾರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಾರೆಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಜಮೀರ್ ಅಹ್ಮದ್ ಖಾನ್,  ನಾನು ಜೆಡಿಎಸ್ ನಿಂದ ಬಂದಿದ್ದೇನೆ.  ಡಿಕೆ ಶಿವಕುಮಾರ್ ಬ್ಲಡ್ ಕಾಂಗ್ರೆಸ್. ಯಾರಿಗೂ ಬ್ಲಡ್ ಬದಲಾವಣೆ ಮಾಡಲು ಆಗಲ್ಲ. ಹಾಗೆಯೇ ಡಿಕೆ ಶಿವಕುಮಾರ್ ಕಾಂಗ್ರೆಸ್ ಬಿಟ್ಟು ಹೋಗಲ್ಲ ಎಂದರು.

Key words:  Siddaramaiah, CM, till ,2028, Minister, Zameer Ahmed Khan