2028ಕ್ಕೆ ಸಿಎಂ ವಿಚಾರ: ಹೆಚ್ ಡಿಕೆಯದ್ದು ಹಗಲುಗನಸು ಕಾಣುವ ಚಟ- ಸಚಿವ ಜಮೀರ್ ವ್ಯಂಗ್ಯ

ದಾವಣಗೆರೆ,ಜನವರಿ,26,2026 (www.justkannada.in): 2028ಕ್ಕೆ ಹೆಚ್.ಡಿ ಕುಮಾರಸ್ವಾಮಿ ಸಿಎಂ ಎಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಮಾತನಾಡಿರುವ ಜಮೀರ್ ಅಹ್ಮದ್ ಖಾನ್, ಎಲ್ಲರೂ ರಾತ್ರಿ ಕನಸು ಕಂಡರೆ ಹೆಚ್ ಡಿಕೆ ಹಗಲುಗನಸು ಕಾಣುತ್ತಾರೆ. ಸಿದ್ದರಾಮಯ್ಯ ಇದ್ದಾಗ 59 ಸ್ಥಾನ ಗೆದ್ದಿದ್ದರು. 2023ಕ್ಕೆ ಅಧಿಕಾರಕ್ಕೆ ಬರುತ್ತೇವೆ ಎಂದು ನಿಂತು ಕೊಂಡರು ಕೇವಲ 19 ಸ್ಥಾನ ಗೆದ್ದರು. ಬಿಜೆಪಿ ಜೊತೆ ಸೇರಿ ಜೆಡಿಎಸ್ ಶಕ್ತಿ ಕಳೆದುಕೊಂಡಿದೆ ಹೆಚ್ ಡಿಕೆಯದ್ದು ಹಗಲುಗನಸು ಕಾಣುವ ಚಟ ಎಂದು ಲೇವಡಿ ಮಾಡಿದರು.

ದಾವಣಗೆರೆ ದಕ್ಷಿಣ ವಿಧಾನಸಭೆ ಉಪಚುನಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಜಮೀರ್,  ಅಲ್ಪಸಂಖ್ಯಾತರಿಗೆ ಟಿಕಟ್ ಕೊಡಬೇಕು ಅಂತಾ ಬೇಡಿಕೆ ಇದೆ. ಹೈಕಮಾಂಡ್ ಗೆ ನಾನು ವರದಿ ಕೊಡುತ್ತೇನೆ. ಶಾಮನೂರು ಇದು ನನ್ನ ಕೊನೇ ಚುನಾವಣೆ ಎಂದು ಹೇಳಿದ್ದರು ಬಳಿಕ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡುತ್ತೇವೆ ಎಂದು ಹೇಳಿದ್ರು.  ಮುಂದೇ ನಾನೇ ಅಲ್ಪಸಂಖ್ಯಾತರನ್ನ ನಿಲ್ಲಿಸಿ ಗೆಲ್ಲಿಸುವೆ ಅಂದಿದ್ರು ಉಪಚುನಾವಣೆಯಲ್ಲಿ ಮೊದಲ ಆದ್ಯತೆ ಅಲ್ಪಸಂಖ್ಯಾತರಿಗೆ ಕೊಡಬೇಕು ಬಳಿಕ ಅಹಿಂದ ಮುಖಂಡರಿಗೆ ಟಿಕೆಟ್ ಕೊಡಬೇಕೆಂಬ ಆಸೆ ಇದೆ ಎಂದರು.

Key words: CM 2028,  HDK, habit, daydreaming, Minister, Zameer Ahmed Khan