ಮೃತ ‘ಕೈ’ ಕಾರ್ಯಕರ್ತನ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಕೊಟ್ಟು ಧೈರ್ಯ ತುಂಬಿದ ಸಚಿವ ಜಮೀರ್

ಬಳ್ಳಾರಿ,ಜನವರಿ,3,2026 (www.justkannada.in):   ಬ್ಯಾನರ್‌ ಕಟ್ಟುವ ವಿಚಾರಕ್ಕೆ ಗಲಾಟೆಯಾಗಿ ಫೈರಿಂಗ್ ನಿಂದ ಮೃತಪಟ್ಟ ಕಾಂಗ್ರೆಸ್‌ ಕಾರ್ಯಕರ್ತ ರಾಜಶೇಖರ್ ಗೆ ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ವೈಯಕ್ತಿಕವಾಗಿ 25 ಲಕ್ಷ ರೂ. ಪರಿಹಾರ ನೀಡಿದರು.

ಮೃತ ರಾಜಶೇಖರ್  ಮನೆಗೆ  ಇಂದು ಭೇಟಿ ನೀಡಿ  ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ನಿಮ್ಮೊಂದಿಗೆ ಸರ್ಕಾರ ನಮ್ಮ ಶಾಸಕರು ಇದ್ದಾರೆ ಎಂದು ಸಚಿವ ಜಮೀರ್ ಅಹಮದ್ ಖಾನ್ ಧೈರ್ಯ ತುಂಬಿದರು. ನಂತರ 25 ಲಕ್ಷ ರೂ. ಪರಿಹಾರ ನೀಡಿದರು.

ಬಳಿ ಮಾತನಾಡಿದಸಚಿವ ಜಮೀರ್ ಅಹ್ಮದ್ ಖಾನ್ ”ಮೊನ್ನೆ ದಿನ ಘಟನೆಯಲ್ಲಿ ರಾಜಶೇಖರ ನಿಧನ ಹೊಂದಿದ್ದಾರೆ. ಮನೆ ನೋಡಿ ಬೇಜಾರಾಗಿದೆ, ದೊಡ್ಡ ಮಗನಾಗಿ ಮನೆಗೆ ಆಸರೆಯಾಗಿದ್ದ.ತಂದೆ ಹೋಟೆಲ್ ಇಟ್ಟು ಕೊಂಡಿದ್ದರು.ನಾನು ಭರತ್, ಗಣೇಶ್ ಸೇರಿ ಸಹಾಯ ಮಾಡಿದ್ದೇವೆ ಎಂದರು.

Key words: Minister, Zameer Ahamad khan, Ballari, congress activitist