ಬೆಂಗಳೂರು,ನವೆಂಬರ್,12,2025 (www.justkannada.in): ಇಸ್ಲಾಂ ಧರ್ಮದಲ್ಲಿ ಭಯೋತ್ಪಾದನೆಗೆ ಅವಕಾಶವಿಲ್ಲ. ಭಯೋತ್ಪಾದಕರು ಮುಸ್ಲಿಮರಾಗಲು ಸಾಧ್ಯವಿಲ್ಲ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್ , ಭಯೋತ್ಪಾದಕರಿಗೆ ಜಾತಿಯೇ ಇಲ್ಲ. ಇಸ್ಲಾಂ ಧರ್ಮದಲ್ಲಿ ಟೆರರಿಸಂಗೆ ಅವಕಾಶ ಇಲ್ಲ. ಇಸ್ಲಾಂ ಧರ್ಮದ ಪ್ರಕಾರ ಭಯೋತ್ಪಾದನೆ ಮಾಡುವವನು ಮುಸ್ಲಿಂ ಅಲ್ಲ, ಹಾಗೇನಾದರೂ ಮಾಡಿದರೆ ಅವನು ಹುಳ ಬಿದ್ದು ಸಾಯುತ್ತಾನೆ ಎಂದರು.
ಬಿಹಾರ ಚುನಾವಣೆಗಿಂತ ಒಂದು ದಿನದ ಮುಂಚೆ ಬ್ಲಾಸ್ಟ್ ಹೇಗೆ ಆಯಿತು. ಹಾಗೇನಾದರೂ ಆಗಿದ್ದರೆ ಯಾರೂ ಒಳ್ಳೆಯದಾಗಲ್ಲ. ನವೆಂಬರ್ 11ಕ್ಕೆ ಬಿಹಾರ ಚುನಾವಣೆ ನಡೆಯಿತು, ಒಂದು ದಿನದ ಮುಂಚೆ ಬ್ಲಾಸ್ಟ್ ಆಗಿದೆ. ಇದೆಲ್ಲಾ ಹೇಗೆ ಎಂದು ಜಮೀರ್ ಅಹ್ಮದ್ ಖಾನ್ ಪ್ರಶ್ನಿಸಿದರು.
Key words: Terrorism, no place, Islam, Minister, Zameer







