‘ತನುಜಾ’ ಸಿನಿಮಾಗಾಗಿ ಬಣ್ಣ ಹಚ್ಚಿದ ಸಚಿವ ಸುಧಾಕರ್

ಬೆಂಗಳೂರು, 09 ಫೆಬ್ರವರಿ 2021 (www.justknnda.in): ಸಚಿವ ಸುಧಾಕರ್ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ.

ಹೌದು. ‘ತನುಜಾ’ ಹೆಸರಿನ ಸಿನಿಮಾ ಒಂದರಲ್ಲಿ ಸಚಿವ ಕೆ.ಸುಧಾಕರ್ ನಟಿಸಲಿದ್ದಾರೆ. ‘ತನುಜಾ’ ನಿಜಜೀವನದ ಘಟನೆಯಿಂದ ಪ್ರೇರಣೆಗೊಂಡ ಸಿನಿಮಾವಾಗಿದೆ.

ಸಿನಿಮಾದ ಪೋಸ್ಟರ್ ಅನ್ನು ಇಂದು ಸಿಎಂ ಯಡಿಯೂರಪ್ಪ ಬಿಡುಗಡೆ ಗೊಳಿಸಿದ್ದಾರೆ.
ಸಿನಿಮೀಯ ರೀತಿಯಲ್ಲಿ ಎಂಬಿಬಿಎಸ್ ಸೀಟು ಗಿಟ್ಟಿಸಿಕೊಂಡ ಪ್ರತಿಭಾವಂತ ವಿದ್ಯಾರ್ಥಿನಿ ಶಿಕಾರಿಪುರದ, ಮಲ್ಲೇನಹಳ್ಳಿ ಗ್ರಾಮದ ತನುಜಾ ಕುರಿತಾದ ಸಿನಿಮಾ ಇದಾಗಿದೆ.