ಪ್ರಿಯಾಂಕ್ ಖರ್ಗೆ ಸಿಐಡಿ ವಿಚಾರಣೆಗೆ ಗೈರಾದ ಬಗ್ಗೆ ಟೀಕಿಸಿದ ಸಚಿವ ಎಸ್.ಟಿ ಸೋಮಶೇಖರ್

ಬೆಂಗಳೂರು,ಮೇ,4,2022(www.justkannada.in):  ಪಿಎಸ್ ಐ ನೇಮಕಾತಿ ಪ್ರಕರಣದಲ್ಲಿ ಸಿಐಡಿ ಮೂರು ನೋಟೀಸ್ ನೀಡಿದರೂ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಉತ್ತರ ನೀಡದ ಹಿನ್ನೆಲೆ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಟೀಕೆ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ನಾಯಕರು 4 ವರ್ಷ ಮಲಗಿದ್ರು ಚುನಾವಣೆ ಸಮಯದಲ್ಲಿ ಮಾತನಾಡಲು ಶುರು ಮಾಡಿಕೊಂಡಿದ್ದಾರೆ. ಪ್ರಿಯಾಂಕ್ ಖರ್ಗೆಗೆ ನೋಟೀಸ್ ಕೊಟ್ಟರೂ ಉತ್ತರ ಕೊಡಲು ಧೈರ್ಯ ಪ್ರಿಯಾಂಕ್ ಖರ್ಗೆಗೆ ಇಲ್ಲ. ಪ್ರಿಯಾಂಕ್ ಖರ್ಗೆ ಏನ್ ದೊಡ್ಡ ಲಿಡರಾ…? ಎಂದು ಪ್ರಶ್ನಿಸಿದರು.

ಸುರೇಶ್ ಗೌಡ ಲೋಕಲ್ ರೌಡಿ ತರ ಆಡ್ತಾರೆ.  ಸಂಸದರಾದ ಮೇಲೆ ಬದಲಾಗ್ತಾರೆ ಅಂದುಕೊಂಡಿದ್ವಿ. ಅದರೆ ಅವರ ವರ್ತನೆ ಬದಲಾಗಲಿಲ್ಲ. ಅಶ್ವತ್ ನಾರಾಯಣ್ ಮೇಲೆ  ಹಲ್ಲೆ ಮಾಡಲು ಯತ್ನಿಸಿದ್ರು. ಈಗಲಾದ್ರೂ ನಿಮ್ಮ ನಡೆ ಸರಿ ಮಾಡಿಕೊಳ್ಳಿ ಎಂದು ಡಿಕೆ ಸುರೇಶ್ ಗೆ  ಸಚಿವ ಎಸ್.ಟಿ ಸೋಮಶೇಖರ್ ನೀಡಿದರು.

Key words: Minister- ST Somashekhar- criticizes -Priyank Kharge