ವಂಚನೆ ಆರೋಪದಲ್ಲಿ ಬಂಧನವಾಗಿದ್ಧ ಸಚಿವ ಶ್ರೀರಾಮುಲು ಅವರ ಪಿಎ ರಾಜಣ್ಣ ಬಿಡುಗಡೆ.

ಬೆಂಗಳೂರು,ಜುಲೈ,2,2021(www.justkannada.in):  ವಂಚನೆ ಆರೋಪದಲ್ಲಿ ಸಿಸಿಬಿ ಪೊಲೀಸರಿಂದ ಬಂಧಿತರಾಗಿ ವಿಚಾರಣೆ ಎದುರಿಸಿದ್ಧ ಸಚಿವ ಶ್ರೀರಾಮುಲು ಅವರ ಪಿಎ ರಾಜಣ್ಣ ಅವರನ್ನ ಬಿಡುಗಡೆ ಮಾಡಲಾಗಿದೆ.jk

ಸಚಿವ ಶ್ರೀರಾಮುಲು ಅವರ ಆಪ್ತ ಸಹಾಯಕ ರಾಜಣ್ಣ ವಿರುದ್ಧ ಸಿಎಂ ಬಿಎಸ್ ವೈ ಪುತ್ರ ಬಿವೈ ವಿಜಯೇಂದ್ರ ಮತ್ತು ಸಚಿವ ಶ್ರೀರಾಮುಲು ಹೆಸರು ಬಳಸಿ ವಂಚನೆ ಮಾಡಿದ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಬಿವೈ ವಿಜಯೇಂದ್ರ ದೂರು ನೀಡಿದ್ದರು. ಬಳಿಕ ಸಚಿವರ ಮನೆಯಲ್ಲೇ ನಿನ್ನೆ ರಾತ್ರಿ ರಾಜಣ್ಣರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದರು.

ಅಡುಗೋಡಿಯಲ್ಲಿರುವ ಟೆಕ್ನಿಕಲ್ ಸೆಲ್ ನಲ್ಲಿ ರಾಜಣ್ಣರನ್ನ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದು ರಾಜಣ್ಣರನ್ನ ಇದೀಗ ರಿಲೀಸ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಜಣ್ಣ ಮಾತನಾಡಿದ್ದಾರೆಂಬ ವಿಡಿಯೋ ಸಿಸಿಬಿಗೆ ಲಭ್ಯವಾಗಿದ್ದು ಈ ಹಿನ್ನೆಲೆಯಲ್ಲಿ ವಿಚಾರಣೆ ವೇಳೆ ರಾಜಣ್ಣರ ವಾಯ್ಸ್ ಸ್ಯಾಂಪಲ್ ಸಂಗ್ರಹಿಸಿ ಎಫ್ ಎಸ್ ಎಲ್ ಗೆ ರವಾನಿಸಿದ್ದಾರೆ. ಹಾಗೆಯೇ ಮುಂದಿನ ವಿಚಾರಣೆಗೆ ಹಾಜರಾಗುವಂತೆ ರಾಜಣ್ಣರಿಗೆ ಸಿಸಿಬಿ ಸೂಚನೆ ನೀಡಿದೆ.

Key words:  minister- Sriramulu- PA-Rajanna-release-CCB