Monday, October 5, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Front Page ವಜಾಗೊಂಡಿದ್ದ ಸಾರಿಗೆ ನೌಕರರಿಗೆ ನೆಮ್ಮದಿಯ ಸುದ್ದಿ ನೀಡಿದ ಸಚಿವ ಶ್ರೀರಾಮುಲು

ವಜಾಗೊಂಡಿದ್ದ ಸಾರಿಗೆ ನೌಕರರಿಗೆ ನೆಮ್ಮದಿಯ ಸುದ್ದಿ ನೀಡಿದ ಸಚಿವ ಶ್ರೀರಾಮುಲು

ಬೆಂಗಳೂರು, ಜನವರಿ 02, 2021 (www.justkannada.in): ಸಾರಿಗೆ ನೌಕರರಿಗೆ ಸಚಿವ ಶ್ರೀರಾಮುಲು ನೆಮ್ಮದಿಯ ಸುದ್ದಿ ನೀಡಿದ್ದು, ಶೀಘ್ರವೇ ವಜಾಗೊಂಡ ನೌಕರರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಮುಷ್ಕರ, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನೌಕರರನ್ನು ವಜಾ ಮಾಡಲಾಗಿತ್ತು. ಆ ನೌಕರರ ಕುಟುಂಬಗಳ ಸ್ಥಿತಿ ಗತಿ ನೋಡಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ನೌಕರರಿಗೆ ಮತ್ತಷ್ಟು ಸಲಹೆ ನೀಡಿರುವ ಶ್ರೀರಾಮುಲು, ನೌಕರರು ಮುಷ್ಕರದ ಬದಲು ಸರ್ಕಾರದೊಂದಿಗೆ ಮಾತುಕತೆ ನಡೆಸಬೇಕು. ಈ ಮೂಲಕ ಸೌಹಾರ್ದಯುತವಾಗಿ ಬೇಡಿಕೆ ಈಡೇರಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದ್ದಾರೆ.