ಹುಣಸೂರಲ್ಲಿ ವಿಶ್ವನಾಥ್ ಬಿಜೆಪಿ ಅಭ್ಯರ್ಥಿಯಲ್ಲ, ನಾನೇ ಅಭ್ಯರ್ಥಿ: ನನ್ನನ್ನು ಗೆಲ್ಲಿಸಲು ಬಿಜೆಪಿ ಮತ ಹಾಕಿ ಎಂದ ಶ್ರೀರಾಮುಲು

ಮೈಸೂರು, ನವೆಂಬರ್, 24, 2019 (www.justkannada.in): ಮೈಸೂರು ಜಿಲ್ಲೆಯ ಹುಣಸೂರು ವಿಧಾನ ಸಭೆ ಕ್ಷೇತ್ರದಲ್ಲಿ ಸಚಿವ ಬಿ.ಶ್ರೀರಾಮುಲು ಬಿಜೆಪಿ ಅಭ್ಯರ್ಥಿ ಎಚ್. ವಿಶ್ವನಾಥ್ ಪರ ಪ್ರಚಾರ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಹುಣಸೂರಿನಲ್ಲಿ ವಿಶ್ವನಾಥ್ ಅವರನ್ನ ಗೆಲ್ಲಿಸಬೇಕು. ಇಲ್ಲಿ ವಿಶ್ವನಾಥ್ ಬಿಜೆಪಿ ಅಭ್ಯರ್ಥಿ ಅಲ್ಲ. ಶ್ರೀರಾಮುಲು ಬಿಜೆಪಿ ಅಭ್ಯರ್ಥಿ. ಹೀಗಾಗಿ ಮತದಾರರು ಬಿಜೆಪಿಗೆ ಹೆಚ್ಚಿನ ಮತಗಳನ್ನ ನೀಡಿ ಗೆಲ್ಲಿಸಲೇಬೇಕು.

ವಿಶ್ವನಾಥ್ ಅವರೂ ಕೂಡ ಹಳ್ಳಿ ಹಳ್ಳಿಗಳಿಗೆ ಬರ್ತಾರೆ. ಮಾತಾಡ್ತಾರೆ. ವಿಶ್ವನಾಥ್ ಅವರು ಹಿರಿಯ ನಾಯಕರಿದ್ದಾರೆ ಎಂದು ಬನ್ನಿಕುಪ್ಪೆಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಸಚಿವ ಶ್ರೀರಾಮುಲು ಹೇಳಿದರು.