ವಿದ್ಯಾರ್ಥಿಗಳೊಂದಿಗೆ ಸಚಿವ ಬಿ. ಶ್ರೀರಾಮುಲು ಸಂವಾದ.

ರಾಯಚೂರು. ಅಕ್ಟೋಬರ್,8,2021( www.justkannada.in): ಸಿಂದನೂರಿನಲ್ಲಿಂದು ಪರಿಶಿಷ್ಟ ವರ್ಗದ ಮೆಟ್ರಿಕ್ ನಂತದ ವಿದ್ಯಾರ್ಥಿನಿಯರ  ನಿಲಯವನ್ನು ಸಾರಿಗೆ ಮತ್ತು  ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ಅವರು  ಉದ್ಘಾಟಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಸಚಿವ ಬಿ.ಶ್ರೀರಾಮುಲು ವಿದ್ಯಾರ್ಥಿನಿಯರೊಂದಿಗೆ ಮುಕ್ತವಾಗಿ ಚರ್ಚಿಸಿದರು. ವಿದ್ಯಾರ್ಥಿಗಳಿಗೆ ದೊರಕುವ ಸೌಕರ್ಯ, ಸೌಲಭ್ಯ, ಊಟೋಪಚಾರದ ಗುಣಮಟ್ಟ, ಶಿಕ್ಷಣಕ್ಕೆ ಪೂರಕ ಸೌಲಭ್ಯಗಳ ಕುರಿತು ಚರ್ಚಿಸಿದರು. ನಗರದ ಹೊರವಲಯದಲ್ಲಿರುವ  ಈ ವಿದ್ಯಾರ್ಥಿನಿಲಯಲ್ಲಿ ಭದ್ರತೆಗಾಗಿ ಸಿಸಿ ಕ್ಯಾಮರಾ ಅಳವಡಿಸಲಾಗುವುದು. ಶುದ್ದ ಕುಡಿಯುವ ನೀರಿಗಾಗಿ ಆರ್ ಓ ಪ್ಲಾಂಟ್ ಅಳವಡಿಸಲಾಗಿದೆ. ಕೂಡು ರಸ್ತೆಯನ್ನು  ಅಭಿವೃದ್ಧಿಗೆ ಕ್ರಮವಹಿಸಲಾಗುವುದು.  ನಿಲಯಾರ್ಥಿಗಳು  ಶಾಲೆ, ಕಾಲೇಜುಗಳಿಗೆ ಹೋಗಿ ಬರಲು  ಅನುಕೂಲವಾಗುವಂತೆ ಸರ್ಕಾರಿ ಬಸ್ ವ್ಯವಸ್ಥೆಯನ್ನು ಕೂಡಲೇ  ಕಲ್ಪಿಸುವಂತೆ ಸ್ಥಳದಲ್ಲೇ ಇದ್ದ ಎನ್ ಇ ಕೆಎಸ್ ಆರ್ ಟಿಸಿಯ ಡಿಸಿ ಅವರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ವೆಂಕಟರಾವ್ ನಾಡಗೌಡ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಪಿ.ಎಸ್. ಕಾಂತರಾಜ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Key words: Minister- Sriramulu –discuss- with- students