ಮಠದೊಳಕ್ಕೆ  ಸಚಿವ ಸೋಮಣ್ಣ ಕಾರು ಬಿಟ್ಟಿದ್ದಕ್ಕೆ ಗರಂ: ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡ ಎಸ್.ಪಿ ಅನೂಪ್ ಶೆಟ್ಟಿ…

ತುಮಕೂರು,ಜ,2,2020(www.justkannada.in): ಇಂದು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿತ್ತಿದ್ದು ಈ ಹಿನ್ನೆಲೆ ಮಠದ ಸುತ್ತಮುತ್ತಾ ಬಿಗಿ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಈ ನಡುವೆ ಮಠದೊಳಕ್ಕೆ ಸಚಿವ ವಿ.ಸೋಮಣ್ಣ ಅವರ ಕಾರನ್ನ ಬಿಟ್ಟಿದ್ದಕ್ಕೆ ತಮ್ಮ ಸಿಬ್ಬಂದಿ ವಿರುದ್ದ ಎಸ್ ಪಿ ಅನೂಪ್ ಶೆಟ್ಟಿ ಗರಂ ಆದ ಘಟನೆ ನಡೆದಿದೆ.

ಇಂದು ಪ್ರಧಾನಿ ಮೋದಿ ಸಿದ್ಧಗಂಗಾ ಮಠಕ್ಕೆ ಭೇಟಿ ಹಿನ್ನೆಲೆ ಸಚಿವ ವಿ.ಸೋಮಣ್ಣ ಮಠಕ್ಕೆ ಆಗಮಿಸಿದ್ದರು. ಈ ವೇಳೆ ಪೊಲೀಸ್ ಸಿಬ್ಬಂದಿ ಸಚಿವ ಸೋಮಣ್ಣ ಅವರನ್ನ ಕಾರನ್ನ ಒಳಗಡೆ ಬಿಟ್ಟಿದ್ದಾರೆ.  ಕಾರು ಬಿಟ್ಟಿದ್ದಕ್ಕೆ ಪೊಲೀಸ್ ಸಿಬ್ಬಂದಿಗೆ ಎಸ್ ಪಿ ಅನೂಪ್ ಶೆಟ್ಟಿ ಕ್ಲಾಸ್ ತೆಗೆದುಕೊಂಡರು.

ಹತ್ತು ಸಲ ಹೇಳಿದ್ದೀನಿ  ಗಾಡಿ ಬಿಡಬಾರ್ದು ಅಂದ್ರೆ ಬಿಡಬಾರ್ದು.  ನಾನು ಯಾಕ್ ಬಂದಿದ್ದೀನಿ ಬ್ಯಾಡ್ಜ್ ಕಾಣಿಸ್ತಾ ಇಲ್ವಾ ..? ಬ್ಯಾಡ್ಜ್ ಕಾಣಿಸುತ್ತಾ ನಿನಗೆ. ಒಂದು ರಿಹರ್ಸಲ್‍ಗೆ ಬರಲ್ಲ. ಒಂದು ಬೋರ್ಡ್ ಮೀಟಿಂಗ್‍ಗೆ ಬರೋ ಯೋಗ್ಯತೆ ಇಲ್ಲ ನಿಮಗೆ. ಟೈಮ್ ಪಾಸ್ ಮಾಡೋಕೆ ಬರುತ್ತೀರಾ ಇಲ್ಲಿ” ಎಂದು  ಗರಂ ಆದರು.

ಮೂರು ದಿನದಿಂದ ಕಸ ಗುಡಿಸುತ್ತಿದ್ದವಾ ಇಲ್ಲಿ ಅಯೋಗ್ಯ..  ಅಯೋಗ್ಯ…. ಇನ್‍ಚಾರ್ಜ್ ಯಾಕೆ ಹಾಕಿದ್ದಾರೆ? ಎಸ್‍ಪಿ ಯಾಕೆ ಹಾಕಿದ್ದಾರೆ? 10 ಸಲ ಹೇಳಿದ್ದೇನೆ ಗಾಡಿ ಬಿಡಬೇಡಿ ಅಂತ. ಬಿಡಬಾರದು ಅಂದರೆ ಬಿಡಬಾರದು, ಗೊತ್ತಾಗಲ್ವಾ ನಿಮಗೆ? ಎಂದು ಎಸ್ ಪಿ  ಅನೂಪ್ ಶೆಟ್ಟಿ ಗರಂ ಆಗಿ ಸಿಬ್ಬಂದಿ ವಿರುದ್ದ ಕಿಡಿಕಾರಿದರು.

Key words: Minister- Somanna- car -Siddaganga math-SP –anup shetty-class – staff.