ಕೊಪ್ಪಳ,ಸೆಪ್ಟಂಬರ್,17,2025 (www.justkannada.in): ಜಾತಿ ಸಮೀಕ್ಷೆ ವಿಚಾರದಲ್ಲಿ ಬಿಜೆಪಿಯವರೇ ಗೊಂದಲ ಸೃಷ್ಠಿ ಮಾಡುತ್ತಿದ್ದಾರೆ ಎಂದು ಸಚಿವ ಶಿವರಾಜ್ ತಂಗಡಗಿ ವಾಗ್ದಾಳಿ ನಡೆಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ಜಾತಿ ಸಮೀಕ್ಷೆಯ ವಿಚಾರದಲ್ಲಿ ರಾಜ್ಯದ ಜನರಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸುತ್ತಿರುವ ಬಿಜೆಪಿಗರಿಗೆ ಧರ್ಮದ ಹುಚ್ಚು ಹಿಡಿದಿದೆ. ನಮ್ಮ ಸರಕಾರ, ಜಾತಿ ಸಮೀಕ್ಷೆಯಲ್ಲಿ ಜನರಿಗೆ ಕ್ರಿಶ್ಚಿಯನ್ ಪದ ಸೇರಿಸಿ ಎಂದು ಎಲ್ಲಿಯೂ ಹೇಳಿಲ್ಲ. ಜಾತಿಗಳ ಮುಂದೆ ಕ್ರಿಶ್ಚಿಯನ್ ಪದ ಪ್ರಯೋಗ ಆಯೋಗ ಚರ್ಚಿಸಿ, ಕ್ರಮ ಕೈಗೊಂಡಿದೆ ಎಂದರು.
ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಈವರೆಗೆ ಬಿಜೆಪಿಯವರು ಅಭಿವೃದ್ಧಿ ಬಗ್ಗೆಎಂದಾದರೂ ಅಭಿವೃದ್ದಿ ಬಗ್ಗೆ ಮಾತನಾಡಿದ್ದನ್ನ ನೋಡಿದ್ದೀರಾ…? ಅವರಿಗೆ ಕೇವಲ ಧರ್ಮ- ಧರ್ಮಗಳ ನಡುವೆ ಜಗಳ, ಜನರಲ್ಲಿ ಗೊಂದಲ ಸೃಷ್ಟಿಸುವುದಷ್ಟೆ ಬೇಕಾಗಿದೆ. ಹೀಗಾಗಿ ರಾಜ್ಯದ ಜನತೆ ಯಾವುದೇ ಕಾರಣಕ್ಕೂ ಗೊಂದಲಕ್ಕೆ ಒಳಗಾಗದೇ ನಿಮ್ಮ ಜಾತಿ- ಧರ್ಮ ಏನಿದೆ ಅದನ್ನು ಬರೆಯಿಸಿ ಎಂದು ತಿಳಿಸಿದರು.
ಅನರ್ಹರ ಬಿಪಿಎಲ್ ಕಾರ್ಡ್ ರದ್ದು ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಶಿವರಾಜ್ ತಂಗಡಗಿ, ಇದಕ್ಕೆ ರಾಜ್ಯ ಸರ್ಕಾರ ಕಾರಣ ಅಲ್ಲ. ಕೇಂದ್ರ ಸರ್ಕಾರ ಕಾರಣ. ಬಿಪಿಎಲ್ ಕಾರ್ಡ್ ಬಗ್ಗೆ ಕೇಂದ್ರ ಸರ್ಕಾರ ಕೆಲ ಗೈಡ್ ಲೈನ್ಸ್ ತಂದಿದೆ. ಹಾಗಾಗಿ ರಾಜ್ಯ ಆಹಾರ ಇಲಾಖೆ ಪರಿಶೀಲನೆ ಮಾಡಿದೆ ಎಂದರು.
Key words: caste survey, issue, BJP, confusion, Minister, Shivraj Thangadgi