ಬೆಂಗಳೂರು,ಸೆಪ್ಟಂಬರ್,24,2025 (www.justkannada.in): ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಸರಿಯಾಗಿ ನಡೆಯುತ್ತಿದೆ. ಕೊಟ್ಟ ಅವಧಿಯಲ್ಲಿ ಸಮೀಕ್ಷೆ ಮುಗಿಸುತ್ತೇವೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ಸಮೀಕ್ಷೆ ನಡೆಯುತ್ತಿದೆ ನಾನು ಸಭೆಯನ್ನ ಕರೆದಿದ್ದೇನೆ. ನಾವು ಕೊಟ್ಟ ಅವಧಿಯಲ್ಲಿ ಸಮೀಕ್ಷೆ ಕಾರ್ಯವನ್ನ ಮುಗಿಸುತ್ತೇವೆ. ಸಣ್ಣ ಪುಟ್ಟ ಗೊಂದಲ ಇದ್ದೇ ಇರುತ್ತದೆ . ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಸರಿಯಾಗಿ ನಡೆಯುತ್ತಿದೆ. ಬೆಂಗಳೂರು ಮಹಾನಗರದಲ್ಲಿ ಸರ್ವೆ ಕಾರ್ಯ ವಿಳಂಬವಾಗುತ್ತಿದೆ. ಹೈಕೋರ್ಟ್ ಆದೇಶ ಏನು ಬರುತ್ತದೆ ನೋಡೋಣ. ಕಾನೂನು ಪಾಲನೆ ಮಾಡೋದು ನಮ್ಮ ಕರ್ತವ್ಯ. ಆಕ್ಟೋಬರ್ 7ರವರೆಗೆ ನೋಡೋಣ ಮುಂದೆ ವಿಸ್ತರಿಸುವ ಬಗ್ಗೆ ನೋಡೋಣ ಎಂದರು.
ಒಕ್ಕಲಿಗ ಲಿಂಗಾಯಿತ ಮುಖಂಡರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಬಗ್ಗೆ ಗೊತ್ತಿಲ್ಲ ಹೈಕಮಾಂಡ್ ನಾಯಕರು ಏನಾದರೂ ಇದ್ದರೆ ಸಿಎಂಗೆ ಹೇಳುತ್ತಾರೆ ಎಂದು ಶಿವರಾಜ್ ತಂಗಡಗಿ ತಿಳಿಸಿದರು.
Key words: social and educational survey. Minister, Shivaraj Thangadgi