ಕೊಪ್ಪಳ,ಆಗಸ್ಟ್,26,2025 (www.justkannada.in): ಮುಸ್ಲಿಂ ಸಮಾಜದ ಯುವತಿಯರನ್ನು ಪ್ರೀತಿಸಿ ಮದುವೆಯಾದರೆ 5 ಲಕ್ಷ ಹಣ ಕೊಡುತ್ತೇನೆ ಎಂದು ಘೋಷಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ಸಚಿವ ಶಿವರಾಜ್ ತಂಗಡಗಿ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಮಹಿಳೆಯ ಬಗ್ಗೆ ಗೌರವವಿಲ್ಲ ಎಂಬುದು ಅವರ ಮಾತಿಂದಲೇ ಗೊತ್ತಾಗುತ್ತಿದೆ. ಯಾವ ನೈತಿಕತೆಯಿಂದ ಅವರು ಈ ರೀತಿ ಹೇಳಿಕೆ ಕೊಡುತ್ತಾರೆ? ಎಂದು ವಾಗ್ದಾಳಿ ನಡೆಸಿದರು. .
ದುಡ್ಡು ಇವರ ಬಳಿ ಮಾತ್ರ ಇದೆ ಅಂದುಕೊಂಡಿದ್ದಾರಾ? ಬೇರೆ ಜಾತಿ ಧರ್ಮದ ಹೆಣ್ಣುಮಕ್ಕಳ ವಿಷಯದಲ್ಲಿ ಕೀಳಾಗಿ ಮಾತನಾಡುವುದು ದೇಶ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಒಪ್ಪಲ್ಲ ಎಂದು ಸಚಿವ ಶಿವರಾಜ್ ತಂಗಡಗಿ ಹರಿಹಾಯ್ದರು.
Key words: MLA, Basanagowda patil Yatnal, no respect, women, Minister, Shivaraj Thangadgi