Friday, October 2, 2026

BDA Apartments

ದೆಹಲಿ ಹೈಕೋರ್ಟ್ ನ್ಯಾಯಾಧೀಶರ ಮನೆಯಲ್ಲಿ ನಗದು ಪತ್ತೆ: ತನಿಖೆ ಆರಂಭಿಸಿದ ಸುಪ...
Home Front Page ಒಂದೊಂದು ಕ್ಷೇತ್ರದಲ್ಲಿ ಒಂದೊಂದು ರೀತಿ ಅಸಮಾಧಾನ: ಸಿಎಂ ಸರಿಪಡಿಸ್ತಾರೆ- ಸಚಿವ ಸತೀಶ್ ಜಾರಕಿಹೊಳಿ

ಒಂದೊಂದು ಕ್ಷೇತ್ರದಲ್ಲಿ ಒಂದೊಂದು ರೀತಿ ಅಸಮಾಧಾನ: ಸಿಎಂ ಸರಿಪಡಿಸ್ತಾರೆ- ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು,ಜೂನ್,26,2025 (www.justkannada.in): ಕಾಂಗ್ರೆಸ್ ಶಾಸಕರ ಅಸಮಾಧಾನ ವಿಚಾರ ಸಂಬಂಧ ಒಂದೊಂದು ಕ್ಷೇತ್ರದಲ್ಲಿ ಒಂದೊಂದು ರೀತಿಯ ಅಸಮಾಧಾನ ಇದೆ. ಸಿಎಂ, ಡಿಸಿಎಂ ಶಾಸಕರ ಸಮಸ್ಯ ಸರಿಪಡಿಸಬೇಕು ಸರಿಪಡಿಸುತ್ತಾರೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ರಾಜುಕಾಗೆ ಜೊತೆ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ. ಕೇವಲ ಅನುದಾನ ವರ್ಗಾವಣೆಗೆ ಅಸಮಾಧಾನ  ಅಂತೇನಲ್ಲ ನೀರಾವರಿ ಯೋಜನೆಗಳ ಬಗ್ಗೆ ಬಹಳಷ್ಟು ಬಾರಿ ಹೇಳಿದ್ದಾರೆ . ನಾವು ನೀರಾವರಿ ಅನುದಾನ ವಿಚಾರವಾಗಿ ಮಾಹಿತಿ ನೀಡಿದ್ದೇವೆ. ಡಿಸಿಎಂ ಬಳಿ ಸಿಎಂ ಮಾತನಾಡಿರಬಹುದು. ನೀರಾವರಿ ಇಲಾಖೆಯಲ್ಲಿ 26 ಸಾವಿರ ಕೋಟಿ ಅನುದಾನವಿದೆ. ಎಲ್ಲವನ್ನೂ ಸರಿಪಡಿಸಲು ಹೈಕಮಾಂಡ್ ನಾಯಕರು ಹೇಳಿದರು. ವೈಯಕ್ತಿಕವಾಗಿ ಶಸ್ತ್ರತ್ಯಾಗ ಏನಿಲ್ಲ. ಯುದ್ದ ಇದ್ದಾಗ ಶಸ್ತ್ರ ಹಿಡಿಯಬೇಕು ಸುಮ್ಮ ಸುಮ್ಮನೆ ಹಿಡಿಯಬಾರದು ಎಂದರು.

ನವೆಂಬರ್ ನಂತರ ರಾಜ್ಯ ರಾಜಕೀಯದಲ್ಲಿ ಭಾರಿ ಬದಲಾವಣೆ ವಿಚಾರ,  ಭಾರಿ ಬದಲಾವಣೆ ಇಲ್ಲ ಸ್ವಲ್ಪ ಬದಲಾವಣೆ ಆಗಬಹುದು. ಭಾರಿ ಬದಲಾವಣೆ ರೀತಿ ಏನು ಅನ್ನಿಸುತ್ತಿಲ್ಲ.  ಸಣ್ಣ ಪುಟ್ಟ ಬದಲಾವಣೆ ಆಗಬಹದು ಸರ್ಕಾರದ ಮಟ್ಟದಲ್ಲಿ ಯಾವುದೇ ಬದಲಾವಣೆ ಇಲ್ಲ. ಸಚಿವರ ಮಟ್ಟದಲ್ಲಿ ಬದಲಾವಣೆ ಆಗಬಹುದು ಎಂದರು.vtu

Key words: Dissatisfaction, constituency, CM, Minister, Satish Jarkiholi