ಬೆಂಗಳೂರು,ಸೆಪ್ಟಂಬರ್,7,2026 (www.justkannada.in): ಹಿಂದುಳಿದ ಒಕ್ಕೂಟ ಸಮಾವೇಶ ನನಗೆ ಸಂಬಂಧಪಟ್ಟಿಲ್ಲ. ನನ್ನನ್ನು ಕರೆದಿರಲಿಲ್ಲ ಹಾಗಾಗಿ ಹೋಗಿಲ್ಲ ಅಷ್ಟೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಇಂದು ಮಾಧ್ಯಮ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಹಿಂದುಳಿದ ಒಕ್ಕೂಟ ಸಮಾವೇಶ ನನಗೆ ಸಂಬಂಧಪಟ್ಟಿಲ್ಲ. ನನಗೆ ಅಹ್ವಾನ ಕೊಟ್ಟಿಲ್ಲ ಇದರ ಬಗ್ಗೆ ನಾನೇನು ಹೇಳೋದು ನನ್ನನ್ನು ಕರೆದಿರಲಿಲ್ಲ ಹಾಗಾಗಿ ಹೋಗಿಲ್ಲ ಅಷ್ಟೆ. ಏಕೆ ಹೀಗೆ ಮಾಡಿದರು ಅಂತಾ ಆಯೋಜಕರನ್ನ ಕೇಳಬೇಕಿತ್ತು. ಇದು ಎಷ್ಟರ ಮಟ್ಟಿಗೆ ಎಫೆಕ್ಟ್ ಆಗುತ್ತೆ ನೋಡೋಣ. ಅದಕ್ಕಾಗಿಯೇ ಒಂದು ಸ್ಟ್ರಾಟಜಿ ಮಾಡೋಣ ಎಂದರು.
ಅಹಿಂದಕ್ಕೆ ನಾನು ಸಿದ್ದರಾಮಯ್ಯ ಮಹದೇವಪ್ಪ ಎಲ್ಲರೂ ಇದ್ದಾರೆ. ಹಿಂದೆ ಹುಬ್ಬಳ್ಳಿಯಲ್ಲಿ ಮಾಡಿದ್ದವು ಈಗ ಇಲ್ಲಿ ಮಾಡಿದ್ದಾರೆ ಅಷ್ಟೆ. ಸಮಾಜದ ಪರವಾಗಿ ನೀವು ಇದ್ದರೆ ಅವರೂ ನಾಯಕರೇ. ಜನ ಒಪ್ಪುವವರು ಅಹಿಂದ ಲೀಡರ್ ಆಗ್ತಾರೆ ಅಷ್ಟೆ. ಸಚಿವ ಯತೀಂದ್ರ ಸಿದ್ದರಾಮಯ್ಯ ಕೂಡ ಮತ್ತೆ ನನ್ನ ಪರ ಮಾತನಾಡಿದ್ದಾರೆ. ನಾನು ಯಾರ ಮೇಲೂ ಸಿಟ್ಟು ಹೊರಗೆ ಹಾಕಲ್ಲ ಆ ಅವಶ್ಯಕತೆ ಇಲ್ಲ ಎಂದರು.
Key words: union convention, Minister, Satish Jarkiholi







