ಕೋರ್ಟ್ ತಡೆ ಹಿನ್ನೆಲೆ, ಸದ್ಯಕ್ಕೆ ಒಳ ಮೀಸಲಾತಿ ಇಲ್ಲ- ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ,ಫೆಬ್ರವರಿ,28,2026 (www.justkannada.in): ಒಳ ಮೀಸಲಾತಿ ವಿಚಾರವಾಗಿ ಕಾಂಗ್ರೆಸ್ ನಿಂದ ದಲಿತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂಬ ಬಿಜೆಪಿ ಆರೋಪ ಕುರಿತು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಸತೀಶ್ ಜಾರಕಿಹೊಳಿ, ಆ ರೀತಿ ಏನು ಅನ್ಯಾಯವಾಗಿಲ್ಲ. ಒಳಮೀಸಲಾತಿಯನ್ನು ತಡೆಹಿಡಿದಿರುವುದು ಕೋರ್ಟ್.   ಸದ್ಯಕ್ಕೆ ಒಳಮೀಸಲಾತಿ ಇಲ್ಲ ಎಂದರು.

ನ್ಯಾಯಾಲಯದಲ್ಲಿ ಇರುವುದರಿಂದ ತಡೆ ಹಿಡಿಯಲಾಗಿದೆ. ಅಂತಿಮ ತೀರ್ಪು ಬಂದ ಬಳಿಕ ಒಳಮೀಸಲಾತಿ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.

Key words: court, stay, internal reservation, Minister, Satish Jarkiholi