ಅನುದಾನದಲ್ಲಿ ತಾರತಮ್ಯ ಆರೋಪ: ಬಿಜೆಪಿಗೆ ಟಾಂಗ್ ಕೊಟ್ಟ ಸಚಿವ ಸತೀಶ್ ಜಾರಕಿಹೊಳಿ

ವಿಜಯಪುರ,ಜುಲೈ,22,2025 (www.justkannada.in):  ಬಿಜೆಪಿ, ಜೆಡಿಎಸ್ ಶಾಸಕರಿಗೆ ಅನುದಾನ ನೀಡುವಲ್ಲಿ ಸರ್ಕಾರ ತಾರತಮ್ಯವೆಸಗಿದೆ ಎಂದು ಆರೋಪಿಸಿರುವ ಬಿಜೆಪಿಗೆ ಲೋಕೋಪಯೋಗಿ ಇಲಾಖೇ ಸಚಿವ ಸತೀಶ್ ಜಾರಕಿಹೊಳಿ ಟಾಂಗ್ ಕೊಟ್ಟಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಸತೀಶ್ ಜಾರಕಿಹೊಳಿ, ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ ಅನುದಾನ ನೀಡಲಾಗಿದೆ. ಬಿಜೆಪಿ ಜೆಡಿಎಸ್ ಶಾಸಕರಿಗೆ ತಲಾ 25 ಕೋಟಿ  ಕೊಟ್ಟಿದ್ದೇವೆ. ಈ ಹಿಂದೆ ಬಿಜೆಪಿಗರು ನಮಗೆ ಕೇವಲ 5 ಕೋಟಿ ಕೊಟ್ಟಿದ್ದರು. ಈಗ ನಾವು ಬಿಜೆಪಿಯವರಿಗಿಂತ ಹೆಚ್ಚು ಅನುದಾನವನ್ನ ಕೊಟ್ಟಿದ್ದೇವೆ ಎಂದರು.

ಸಿಎಂ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ,  ಏನೇ ಇದ್ದರೂ ಹೈಕಮಾಂಡ್ ನಿರ್ಧಾರ ಮಾಡಬೇಕು.  ಈಗಾಗಲೇ  ಸಿದ್ದರಾಮಯ್ಯ ಸ ನಾನೇ 5 ವರ್ಷ ಸಿಎಂ ಎಂದಿದ್ದಾರೆ ಸಿಎಂ ಕುರ್ಚಿ ಖಾಲಿ ಇಲ್ಲ ಎಂದು ಸ್ವತಃ ಡಿಸಿಎಂ ಹೇಳಿದ್ದಾರೆ. ಅವರೇ ಹೊಂದಾಣೀಕೆ ಆಗಿದ್ದಾರೆ.  ನಾವೇನು ಹೇಳುವಂತಿಲ್ಲ ಎಂದರು.vtu

Key words: grants, BJP,  Minister, Sathish Jarkiholi