ಬೆಂಗಳೂರು,ಡಿಸೆಂಬರ್,25,2025 (www.justkannada.in): ರಾಜ್ಯದಲ್ಲಿ ಸಿಎಂ ಬದಲಾವಣೆ ಗೊಂದಲ ಕುರಿತು ಪ್ರತಿಕ್ರಿಯಿಸಿರುವ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ, ಎಐಸಿಸಿ ಅಧ್ಯಕ್ಷರು ನೀವೇ ಬಗೆಹರಿಸಿಕೊಳ್ಳಿ ಅಂದಿದ್ದಾರೆ. ಹೀಗಾಗಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಅವರಿಬ್ಬರು ಸಮಸ್ಯೆ ಬಗೆಹರಿಸಿಕೊಳ್ಳಬೇಕು . ಅಧ್ಯಕ್ಷರು ಅವರಿಬ್ಬರಿಗೂ ಹೇಳಿದ್ದಾರೆ. ಇದರಲ್ಲಿ ಮೂರನೇಯವರು ಇಲ್ಲ ಎಂದು ತಿಳಿಸಿದರು.
ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿಯಿಂದ ಸಿಎಂ ಭೇಟಿ ಕುರಿತು ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ಮೊದಲ ಬಾರಿ ಭೇಟಿಯಾಗಿಲ್ಲ ಆಗಾಗ ಭೇಟಿ ಆಗುತ್ತಾ ಇರುತ್ತಾರೆ. ರಮೇಶ್ ಜಾರಕಿಹೊಳಿ ಮೂಲ ಕಾಂಗ್ರೆಸ್ ಪಕ್ಷದವರ. ಹೀಗಾಗಿ ದೆಹಲಿಯಲ್ಲಿ ಹಾಗೂ ರಾಜ್ಯದಲ್ಲಿ ಆಗಾಗ ಭೇಟಿಯಾಗುತ್ತಿರುತ್ತಾರೆ ಎಂದರು.
Key words: CM Change, Siddaramaiah, DK Shivakumar, Minister, Sathish Jarkiholi







