ಸರ್ವ ಪಕ್ಷ ಸಭೆ ಕರೆಯದ ಮೋದಿ ತಾವು ಸುಪ್ರೀಂ ಅನ್ಕೊಂಡಿದ್ದಾರಾ..? ಸಚಿವ ಸಂತೋಷ್ ಲಾಡ್ ಕಿಡಿ

ಬೆಂಗಳೂರು,ಮೇ,15,2025 (www.justkannada.in): ಭಾರತ- ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ವಪಕ್ಷಗಳ ಸಭೆ ಕರೆದಿಲ್ಲ. ಮೋದಿ ಏನು ತಾವು ಸುಪ್ರೀಂ ಅನ್ಕೊಂಡಿದ್ದಾರಾ..? ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಕಿಡಿ ಕಾರಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸಂತೋಷ್ ಲಾಡ್, ಮೋದಿ ಬಿಹಾರಕ್ಕೆ ಹೋಗಿ ಭಾಷಣ ಮಾಡಿದ್ರು. ಪಾಕ್ ಬೇಡಿಕೆಯಿಂದ ಕದನ ವಿರಾಮ ಅಂತಾರೆ. ಅತ್ತ ಅಮೇರಿಕ ಅಧ್ಯಕ್ಷ ಟ್ರಂಪ್ ನನ್ನಿಂದಲೇ ಕದನ ವಿರಾಮ ಘೋಷಣೆಯಾಗಿದ್ದು ಅಂತಾರೆ. ಯುದ್ದ ನಡೆದರೂ ಯಾರು ಮಧ್ಯ ಪ್ರವೇಶಿಸಲ್ಲ ಎಂದರು.

ಮೋದಿ ಅವರು ಸೈನ್ಯಕ್ಕೆ ಫ್ರೀ ಹ್ಯಾಂಡ್ ಅಂದರು. ಈಗ ಕದನ ವಿರಾಮ ಘೋಷಿಸಿದ್ದಾರೆ. ಇದಕ್ಕೆ ಕಾರಣ  ಏನು..? ಮೋದಿ ಯಾಕೆ ಉತ್ತರ ಕೊಟ್ಟಿಲ್ಲ. ಪಾಕ್ ಶರಣಾಗಿದೆ ಅಂತಾರೆ.  ಜನರ ಅಭಿಪ್ರಾಯ ಕೇಳಬೇಕಲ್ವಾ?  ಮೋದಿ ಸರ್ವಾಧಿಕಾರಿ ಅನ್ನಿಸಲ್ವಾ..?  ಟ್ರಂಪ ಯಾತ್ರೆ ಮಾಡಿ ಎಂದು ಸಂತೋಷ್ ಲಾಡ್ ಲೇವಡಿ ಮಾಡಿದರು.

Key words:  Ceasefire, Modi, all-party meeting, Minister, Santosh Lad