ಮೈಸೂರು, ಏ.೨೩,೨೦೨೫: ಶ್ರೀನಗರ ಪ್ರವಾಸ ಕೈಗೊಂಡಿರುವ ಕೊಪ್ಪಳ ನಗರದ ನಾಲ್ಕು ಕುಟುಂಬಗಳ ಸದಸ್ಯರು ಜಮ್ಮು ಕಾಶ್ಮೀರದಲ್ಲಿ ಸುರಕ್ಷಿತವಾಗಿದ್ದಾರೆ. ಸಚಿವ ಸಂತೋಷ್ ಲಾಡ್ ಸ್ಥಳದಲ್ಲಿದ್ದು ಈ ಕುಟುಂಬದ ಸುರಕ್ಷತೆ ಬಗೆಗೆ ಭರವಸೆ ನೀಡಿದ್ದಾರೆ.
ರಾಜ್ಯದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಬುಧವಾರ ಶ್ರೀನಗರದಲ್ಲಿರುವ ಕೊಪ್ಪಳ ನಗರದ ಕುಟುಂಬ ಸದಸ್ಯರನ್ನು ಭೇಟಿಯಾಗಿ, ಹೋಟೆಲ್ ಬಿಟ್ಟು ಎಲ್ಲಿಯೂ ಹೋಗದಂತೆ ಸಲಹೆ ನೀಡಿದರು.
ಕೊಪ್ಪಳದ ಸಿದ್ದು ಗಣವಾರಿ, ಉದ್ಯಮಿ ಶರಣಪ್ಪ ಸಜ್ಜನ, ಕಾಂಗ್ರೆಸ್ ಮುಖಂಡ ಕಾಟನ್ ಪಾಷಾ ಮತ್ತು ಶಿವಕುಮಾರ ಪಾವಲಿ ಶೆಟ್ಟರ್ ಕುಟುಂಬ ಸದಸ್ಯರ ಜೊತೆ ಮಂಗಳವಾರ ಶ್ರೀನಗರಕ್ಕೆ ತೆರಳಿದ್ದು, ಅಲ್ಲಿಗೆ ಹೋದಾಗಿನಿಂದಲೂ ಹೋಟೆಲ್‌ನಲ್ಲಿಯೇ ಉಳಿದುಕೊಂಡಿದ್ದಾರೆ.
ಪ್ರವಾಸ ರದ್ದುಗೊಳಿಸಿ ಬುಧವಾರ (ಇಂದು) ಸಂಜೆ ನವದೆಹಲಿಗೆ ವಾಪಸ್ ಹೋಗಲು ತೀರ್ಮಾನಿಸಿದ್ದಾರೆ. ಎಂದು ಕೊಪ್ಪಳ ನಗರದ ಎಂ.ಕಾಟನ್ ಪಾಷಾ ಮಾಹಿತಿ ನೀಡಿದ್ದಾರೆ.
“ನಾವು ತಂಗಿದ್ದ ಹೋಟೆಲ್‌ಗೆ ಸಚಿವ ಸಂತೋಷ ಲಾಡ್ ಭೇಟಿ ನೀಡಿದ್ದರು. ಎಲ್ಲಿಯೂ ಹೋಗಬೇಡಿ ಹೊಟೇಲ್‌ನಲ್ಲಿಯೂ ಇರಿ. ಸಂಜೆ ವೇಳೆಗೆ ವಿಮಾನದ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ’ ಎಂದು ಕೊಪ್ಪಳದ ನಿವಾಸಿಗಳು ತಿಳಿಸಿದ್ದಾರೆ.
key words: Four families, Koppala, Karnataka, Srinagar, Minister Santosh Lad
Four families from Koppal safe in Srinagar: Minister Santosh Lad