ಚಿತ್ರದುರ್ಗ,ಡಿಸೆಂಬರ್,23,2025 (www.justkannada.in): ಮಹಾತ್ಮ ಗಾಂಧೀಜಿಯನ್ನು ಬಿಜೆಪಿಯವರು ಯಾವತ್ತು ಒಪ್ಪಿಲ್ಲ. ಸುಮ್ಮನೆ ಶೋ ಕೊಡುತ್ತಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಕಿಡಿಕಾರಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸಂತೋಷ್ ಲಾಡ್, ಪ್ರಧಾನಿ ಮೋದಿ ಚರಕ ಹಿಡಿದು ಪೋಸ್ ಕೊಡುತ್ತಾರೆ. ಬೇರೆ ದೇಶಕ್ಕೆ ಹೋದಾಗ ಗಾಂಧೀಜಿ ಬಗ್ಗೆ ಭಾಷಣ ಮಾಡುತ್ತಾರೆ. ಯುಪಿಎ ಕಾರ್ಯಕ್ರಮದ ಹೆಸರು ಬದಲಾವಣೆ ಮಾಡಿದ್ದಾರೆ. ಎನ್ ಡಿಎಯಿಂದ ಒಂದು ಹೊಸ ಕಾರ್ಯಕ್ರಮ ಜಾರಿ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದ ಅಭಿವೃದ್ದಿ ನಿಷ್ಕ್ರಿಯ ಎಂಬ ಬಿವೈ ವಿಜಯೇಂದ್ರ ಟೀಕೆಗೆ ತಿರುಗೇಟು ನೀಡಿದ ಸಚಿವ ಸಂತೋಷ್ ಲಾಡ್, ದೆಹಲಿಯಲ್ಲಿ ಈಗ ವಾತಾವರಣ ಹೇಗಿದೆ. ಕೆನಡಾ ಸಿಂಗಾಪುರ ಯುಕೆ ದೇಶದ ಜನರಿಗೆ ನೋಟಿಸ್ ನೀಡುತ್ತಿದೆ. ದೆಹಲಿ ಭಾರತಕ್ಕೆ ಹೋಗಬೇಡಿ ಎಂದು ನೋಟಿಸ್ ನೀಡುತ್ತಿದೆ. ಮೋದಿ ಈ ಬಗ್ಗೆ ಯಾಕೆ ಮಾತಾಡುತ್ತಿಲ್ಲ ಎಂದು ಟಾಂಗ್ ಕೊಟ್ಟರು.
Key words: BJP, Mahatma Gandhi, Minister, Santosh Lad







