ಮತಗಳ್ಳತನ: ಪ್ರಧಾನಿ ಮೋದಿ ವಿರುದ್ದ ಸಚಿವ ಸಂತೋಷ್ ಲಾಡ್ ವಾಗ್ದಾಳಿ

ಮೈಸೂರು,ಆಗಸ್ಟ್,6,2025 (www.justkannada.in): ಮತಗಳ್ಳತನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ, ಬಿಜೆಪಿ ವಿರುದ್ದ ಕಾರ್ಮಿಕ ಸಚಿವ ಸಂತೋಷ್ ಲಾಡ್ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸಂತೋಷ್ ಲಾಡ್,  ಮತಗಳ್ಳತನ ವಿಚಾರವಾಗಿ ಈಗಾಗಲೇ ಸಭೆ ಮಾಡಿದ್ದೇವೆ. ದೇಶದಲ್ಲಿ ಈ ಬಗ್ಗೆ ಪ್ರತಿಭಟನೆ ಮಾಡುತ್ತೇವೆ. ಆ ಬಗ್ಗೆ ಈಗಾಗಲೇ ಸಭೆಗಳು ನಡೆದಿದೆ. ಯಾವ ಕ್ಷೇತ್ರದಲ್ಲಿ ಹೆಚ್ಚು ಆಗಿದೆ ಆ ಬಗ್ಗೆ ನನಗೆ ಅಷ್ಟು ಮಾಹಿತಿ ಇಲ್ಲ. ಪಾರ್ಲಿಮೆಂಟ್ ಚುನಾವಣೆ ಆದ ಮೇಲೆ ಮಹಾರಾಷ್ಟ್ರದಲ್ಲಿ 41  ಲಕ್ಷ ವೋಟ್ ಜಾಸ್ತಿಯಾಗಿದೆ. ಬಿಹಾರದಲ್ಲಿ 61 ಲಕ್ಷ ವೋಟ್ ಕಡಿಮೆ ಆಗಿದೆ ಇದರರ್ಥ ಏನು? ಮತಗಳ್ಳತನ ಆಗಿದೆ ಅಂತಾ ನನಗೆ ಅನ್ನಿಸುತ್ತಿದೆ ಎಂದರು.

4% ವೋಟ್ ಕಡಿಮೆ ಜಾಸ್ತಿ ಆದರೆ ಚುನಾವಣಾ ಆಯೋಗ ಕಾರಣ ಕೊಡಬೇಕು. ಇದನ್ನು ಮುಚ್ಚಿ ಹಾಕಿಕೊಂಡು ತಳ್ಳಿ ಹಾಕಿಕೊಂಡು ಹೋದರೆ ಏನರ್ಥ. ಇದು ಎಲ್ಲರ ಮೂಲಭೂತ ಹಕ್ಕು. ಚುನಾವಣೆ ಗೆಲ್ಲೋದು ಪ್ರಚಾರ ಮಾಡೋದು ಅಷ್ಟೇನಾ ಕೇಂದ್ರ ಸರ್ಕಾರದ ಕೆಲಸ . ಅದರ ಅಡಿಟ್ ಏನು ಮಾಡೋ ಹಾಗಿಲ್ವಾ? ಕ್ಯಾಡ್ ರಿಪೋರ್ಟ್ ಬಿಹಾರದಲ್ಲಿ 70 ಸಾವಿರ ಕೋಟಿ ಮಿಸ್ಸಿಂಗ್ ಆಗಿದೆ ಅಂತಿದೆ. ಇದರ ಬಗ್ಗೆ ಚರ್ಚೆ ಮಾಡೋದು ಬೇಡವಾ? ಕಳೆದ 10 ವರ್ಷದಲ್ಲಿ ಬಿಹಾರದಲ್ಲಿ 150 ಬ್ರಿಡ್ಜ್ ಬಿದ್ದಿದೆ. ಪ್ರಧಾನಿ ಇದನ್ನು ಬಿಟ್ಟು ಪಾಕಿಸ್ತಾನ ಮುಸ್ಲಿಂ ಅಂತ ವೋಟ್ ಕೇಳುತ್ತಾರೆ. ಚುನಾವಣೆ ಗೆದ್ದು ಏನು ಮಾಡ್ತಾರೆ. ಮೋಸ ಮಾಡಿ ಬಿಜೆಪಿಗೆ ಇಷ್ಟು ವೋಟ್ ಬಿದ್ದಿವೆ ಎಂದು ಕಿಡಿಕಾರಿದರು.

ಮೋದಿಗೆ ಧೈರ್ಯವಿದ್ದರೆ ಒಂದು ಪತ್ರಿಕಾಗೋಷ್ಠಿ ಮಾಡಲಿ

ಮೋದಿಗೆ ಧೈರ್ಯವಿದ್ದರೆ ಒಂದು ಪತ್ರಿಕಾಗೋಷ್ಠಿ ಮಾಡಲಿ. ದೇಶದ ಸಾಲ ಜಾಸ್ತಿಯಾಗಿದೆ, ಡಿಸೆಲ್ ಪೆಟ್ರೋಲ್ ಬೆಲೆ  ಏರಿಕೆಯಾಗಿದೆ ಅದರ ಬಗ್ಗೆ ಬಿಜೆಪಿ ಪ್ರತಿಭಟನೆ ಮಾಡಲಿ. ಅದನ್ನು ಬಿಟ್ಟು ರಾಹುಲ್ ಗಾಂಧಿ ವಿರುದ್ಧ ಏನು ಪ್ರತಿಭಟನೆ ಮಾಡುತ್ತಾರೆ ಇವರ ಭಾಷಣ ಜನ ಕೇಳಬೇಕು. ಇವರಿಗೆ ಯಾರು ಪ್ರಶ್ನೆ ಕೇಳಬಾರದು. ಇದು ಬಿಜೆಪಿ ಮನಸ್ಥಿತಿ. ಯುಪಿಎ ಸರ್ಕಾರ ಇದ್ದಾಗ ಅಕ್ರಮ 80 ಲಕ್ಷ ಬಾಂಗ್ಲಾದೇಶ ವಲಸಿಗರನ್ನು ವಾಪಸ್ ಕಳುಹಿಸಿದ್ದೇವೆ. ಬಿಜೆಪಿ ಸರ್ಕಾರ ಎಷ್ಟು ಜನರನ್ನು ಕಳುಹಿಸಿದೆ. ಬರೀ ಸುಳ್ಳು ಹೇಳೋದು . ಪ್ರಚಾರ ಪಡಿಯೋದು. ಟಿವಿ ಟಿವಿ ಟಿವಿ ಇದೇ ಮೋದಿ ಮಾಡಿರೋದು.  ಇವರಿಗೆ ಯಾರು ಪ್ರಶ್ನೆ ಕೇಳಬಾರದು. ಇದು ಬಿಜೆಪಿ ಮನಸ್ಥಿತಿ ಎಂದು ವಾಗ್ದಾಳಿ ನಡೆಸಿದರು.

ಬಹಿರಂಗ ಚರ್ಚೆಗೆ ಬರುವಂತೆ ಮಾಜಿ ಸಂಸದ ಪ್ರತಾಪ್ ಸಿಂಹ ಸವಾಲ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂತೋಷ್ ಲಾಡ್, ಪ್ರತಾಪ್ ಸಿಂಹಗೆ ದೇವರು ಒಳ್ಳೆಯದು ಮಾಡಲಿ  ದೇವರು ಒಳ್ಳೆಯದು ಮಾಡಲಿ ಅಷ್ಟೇ ಹೇಳೋದು ನಾನು ಎಂದರು.

ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಟ್ ವಿತರಣೆ

ಮೈಸೂರಿನಲ್ಲಿ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಟ್ ವಿತರಣೆ ಮತ್ತು ವಿವಿಧ ಯೋಜನೆಗಳ ಕುರಿತು ಅರಿವು ಕಾರ್ಯಕ್ರಮ.

ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಸಾರಿಗೆ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ  ಪಂಚಾಯತಿ ಸಹಯೋಗದಲ್ಲಿ ನಗರದ ಕಲಾಮಂದಿರದಲ್ಲಿ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಟ್ ವಿತರಣೆ ಮತ್ತು ವಿವಿಧ ಯೋಜನೆಗಳ ಕುರಿತು ಅರಿವು ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮವನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ಉದ್ಘಾಟನೆ ಮಾಡಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರಾದ ಕೆ.ಹರೀಶ್ ಗೌಡ, ತನ್ವೀರ್ ಸೇಠ್,ಅನಿಲ್ ಚಿಕ್ಕಮಾದು, ಡಿ.ರವಿಶಂಕರ್, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ಜಿ.ಪಂ‌ ಸಿಇಒ ಯುಕೇಶ್, ಪೋಲಿಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ನೂರಾರು ಅಸಂಘಟಿತ ಕಾರ್ಮಿಕರು ಪಾಲ್ಗೊಂಡಿದ್ದರು.

Key words: Vote rigging,  Minister, Santosh Lad,  PM Modi