ಬೆಂಗಳೂರು,ಜುಲೈ,28,2025 (www.justkannada.in): ಸಿಎಂ ಆಗಲು ಅವಕಾಶ ಸಿಗಲಿಲ್ಲ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಕುರಿತು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ಸಂತೋಷ್ ಲಾಡ್, ಮಲ್ಲಿಕಾರ್ಜುನ ಖರ್ಗೆಯವರು ಬೇರೆಯವರಿಗೆ ಉದಾಹರಣೆ ನೀಡಲು ಹೇಳಿದ್ದಾರೆ. ಇಂತಹ ಅವಕಾಶ ಮಿಸ್ ಆದ್ರೂ ಎಐಸಿಸಿ ಅಧ್ಯಕ್ಷನಾಗಿದ್ದೇನೆ ಎಂದಿದ್ದಾರೆ. ಸಿಎಂ ಆಗಲು ಮಲ್ಲಿಕಾರ್ಜುನ ಖರ್ಗೆ ಅತ್ಯಂತ ಅರ್ಹ ವ್ಯಕ್ತಿ ಎಂದರು.
2004ರಲ್ಲಿ ಅವರ ಜತೆ ಸದನದಲ್ಲಿ ಓಡಾಡುವ ಅವಕಾಶ ಸಿಕ್ಕಿತ್ತು. ಖರ್ಗೆ ಅವರು ಅತ್ಯಂತ ಪ್ರಾಮಾಣಿಕ ಶಿಸ್ತು ಬದ್ದ ಸಂಸದೀಯ ಪಟು. ಖರ್ಗೆ ದೇಶದಲ್ಲಿ ಎಲ್ಲಾ ಹುದ್ದೆ ಅಲಂಕರಿಸಲು ಯೋಗ್ಯ ವ್ಯಕ್ತಿ ಎಂದು ಸಂತೋಷ್ ಲಾಡ್ ತಿಳಿಸಿದರು.
Key words: Mallikarjun Kharge, CM Post, Minister, Santosh Lad