ಸಿಎಂ ಸಿದ್ದರಾಮಯ್ಯ ಅವಶ್ಯಕತೆ ರಾಜ್ಯಕ್ಕೆ ಬಹಳಷ್ಟಿದೆ: ಜೀವನಪೂರ್ತಿ ರಾಜಕೀಯದಲ್ಲಿರಲಿ- ಸಚಿವ ಸಂತೋಷ್ ಲಾಡ್

ಕಲಘಟಗಿ,ಅಕ್ಟೋಬರ್,24,2025 (www.justkannada.in): ಸಿಎಂ ಸಿದ್ದರಾಮಯ್ಯ ಅವಶ್ಯಕತೆ ರಾಜ್ಯಕ್ಕೆ ಬಹಳಷ್ಟಿದೆ. ಹೀಗಾಗಿ ಸಿದ್ದರಾಮಯ್ಯ ಜೀವನಪೂರ್ತಿ ರಾಜಕೀಯದಲ್ಲಿರಲಿ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸಂತೋಷ್ ಲಾಡ್, ಸಿದ್ದರಾಮಯ್ಯ  ಅವರ ಅವಶ್ಯಕತೆ ರಾಜ್ಯಕ್ಕೆ ಬಹಳವಿದೆ. ಸಿದ್ದರಾಮಯ್ಯ ಎಲ್ಲಾ ಚುನಾವಣೆಗಳಲ್ಲಿ ಸ್ಪರ್ಧಿಸಬೇಕು. ಜೀವನಪೂರ್ತಿ ರಾಜಕೀಯದಲ್ಲಿರುಬೇಕು ಎಂದರು.

ಸಂಫುಟ ವಿಸ್ತರಣೆ ಸಹಜ ಪ್ರಕ್ರಿಯೆ.  ಅದರಲ್ಲಿ ಕ್ರಾಂತಿ ಇಲ್ಲ. ಕೆಲವರನ್ನ ತೆಗೆಯುತ್ತಾರೆ. ಕೆಲವರನ್ನ ಆಯ್ಕೆ ಮಾಡಿಕೊಳ್ಳುತ್ತಾರೆ.  ಎಲ್ಲರೂ ಎಲ್ಲಾ ತ್ಯಾಗಕ್ಕೂ ಸಿದ್ದರಿರಬೇಕು. ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ನಿರ್ಧಾರ ಅಂದ ಮೇಲೆ ಗೊಂದಲ ಎಲ್ಲಿದೆ. ಕೇಂದ್ರ ಸರ್ಕಾರದಲ್ಲೆ ಯಾಕೆ ಬದಲಾವಣೆಯಾಗಬಾರದು. ನಿತೀನ್ ಗಡ್ಕರಿ ಯಾಕೆ ಪ್ರಧಾನಿಯಾಗಬಾರದು ಎಂದು ಬಿಜೆಪಿಗೆ ಸಚಿವ ಸಂತೋಷ್ ಲಾಡ್ ಟಾಂಗ್ ಕೊಟ್ಟರು.

Key words:  state needs, CM, Siddaramaiah, Minister, Santhosh Lad