ಬೆಂಗಳೂರು,ಜನವರಿ,27,2026 (www.justkannada.in): ನಮ್ಮ ಮೇಲೆ ಬಂದಿರುವ ಎಲ್ಲಾ ರೋಪಗಳು ಆಧಾರ ರಹಿತವಾದುದು. ನಾನು ರಾಜೀನಾಮೆ ನೀಡಲ್ಲ ಎಂದು ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ಸ್ಪಷ್ಟಪಡಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಆರ್.ಬಿ ತಿಮ್ಮಾಪುರ, ಇದರಲ್ಲಿ ನನ್ನದೇನು ತಪ್ಪು ಇಲ್ಲ ನಾಣು ರಾಜೀನಾಮೆ ಕೊಡಲ್ಲ. ಸದನದಲ್ಲಿ ವಿರೋಧ ಪಕ್ಷಗಳ ಪ್ರಸ್ತಾಪ ಮಾಡಲಿ ನಾನು ಉತ್ತರ ಕೊಡುತ್ತೇನೆ ಅದಕ್ಕೆ ಸಮರ್ಥನೆ ಕೊಡುತ್ತೇನೆ ಎಂದರು.
ನಮ್ಮ ಮೇಲೆ ಬಂದಿರುವ ಎಲ್ಲಾ ಆರೋಪಗಳು ಸುಳ್ಳು. ನಾನು ಸದನದಲ್ಲಿ ಉತ್ತರ ಕೊಡುತ್ತೇನೆ. ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಅದನ್ನೆಲ್ಲಾ ನೋಡಿದ್ದೇನೆ. ನಾನು ಸಿಎಂ ಜೊತೆ ಮಾತನಾಡಿಲ್ಲ ಅದರ ಅವಶ್ಯಕತೆ ಇಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ವಿರುದ್ದ ಯಾರು ಯಾರು ಆರೋಪ ಮಾಡುತ್ತಾರೋ ಮಾಡಲಿ ಎಂದು ಸಚಿವ ತಿಮ್ಮಾಪುರ ತಿಳಿಸಿದರು.
Key words: allegations, baseless, not resign, Minister, RB Thimmapura







