ಕೊತ್ತೂರು ಮಂಜುನಾಥ್ ಪಕ್ಕ ದೇಶಾಭಿಮಾನಿ: ಸೈನಿಕರಿಗೆ ಕಾಂಗ್ರೆಸ್ ಅಪಮಾನ ಮಾಡುವ ಪ್ರಶ್ನೆಯೇ ಇಲ್ಲ- ಸಚಿವ ರಾಮಲಿಂಗರೆಡ್ಡಿ

ರಾಮನಗರ,ಮೇ,17,2025 (www.justkannada.in): ನಾಲ್ಕೈದು ಫ್ಲೈಟ್ ಹಾರಿಸಿದ್ದು ಬಿಟ್ಟರೇ ಏನು ಮಾಡಿಲ್ಲ ಎಂದು ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಹೇಳಿಕೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ರಾಮಲಿಂಗರೆಡ್ಡಿ, ಕೊತ್ತೂರು ಮಂಜುನಾಥ್ ಪಕ್ಕಾ ದೇಶಾಭಿಮಾನಿ. ಸೇನೆಯ ಬಗ್ಗೆ ಕೊತ್ತೂರು ಮಂಜುನಾಥ್ ಗೆ ಬಹಳ ವಿಶ್ವಾಸವಿದೆ. ಸೇನೆ ದೇಶದ ಬಗ್ಗೆ  ಆ ರೀತಿ ಹೇಳಿಲ್ಲ. ಬಿಜೆಪಿ ಮತ್ತು ನಾಯಕರ ಬಗ್ಗೆ ಮಾತ್ರ ಸಂಶಯ ವ್ಯಕ್ತಪಡಿಸಿರಬಹುದು. ಸೈನಿಕರಿಗೆ ಕಾಂಗ್ರೆಸ್ ಅಪಮಾನ ಮಾಡುವ ಪ್ರಶ್ನೆಯೇ ಇಲ್ಲ ಎಂದರು.

ಸೇಣಾ ಮುಖ್ಯಸ್ಥರು ಏನು ಹೇಳುತ್ತಾರೋ ಅದನ್ನ ನಾವು ನಂಬಬೇಕು . ಸೈನಿಕರಿಗೆ ಬಿಜೆಪಿಯವರು ಅಪಮಾನ ಮಾಡಬಹುದು ಅಷ್ಟೆಆದರೆ ಕಾಂಗ್ರೆಸ್  ಅಪಮಾನ ಮಾಡಲ್ಲ ಎಂದರು.

Key words: no question, Congress,  insulting, soldiers,  Minister, Ramalingareddy