ಸಾರಿಗೆ ಸಿಬ್ಬಂದಿ ವೇತನ ಪರಿಷ್ಕರಣೆ ಬಗ್ಗೆ ಸದನದಲ್ಲಿ ಪ್ರಸ್ತಾಪ : ಉತ್ತರ ಕೊಟ್ಟ ಸಚಿವ ರಾಮಲಿಂಗರೆಡ್ಡಿ

ಬೆಳಗಾವಿ,ಡಿಸೆಂಬರ್,18,2025 (www.justkannada.in):  ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಸಾರಿಗೆ ಸಿಬ್ಬಂದಿ ವೇತನ ಪರಿಷ್ಕರಣೆ ಬಗ್ಗೆ ಪ್ರಸ್ತಾಪವಾಗಿದ್ದು ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಉತ್ತರ ನೀಡಿದ್ದಾರೆ.

ವಿಧಾನ ಪರಿಷತ್ ನಲ್ಲಿ  ಎಂಎಲ್ ಸಿ ಸಿ.ಟಿ ರವಿ ಸಾರಿಗೆ ಸಿಬ್ಬಂದಿ ವೇತನ ಪರಿಷ್ಕರ ಬಗ್ಗೆ ಪ್ರಸ್ತಾಪಿಸಿದರು.  ಈ ಕುರಿತು ಉತ್ತರ ನೀಡಿದ ಸಚಿವ ರಾಮಲಿಂಗರೆಡ್ಡಿ, ಸಾರಿಗೆ ಇಲಾಖೆ 4 ನಿಗಮಗಳಲ್ಲಿ ಒಂದ ಲಕ್ಷ ಸಿಬ್ಬಂದಿಗಳು ಇದ್ದಾರೆ . 4 ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಆಗುತ್ತದೆ. ಕೊರೋನಾ ಸಮಯದಲ್ಲಿ ನೌಕರರರ ವೇತನ ಪರಿಷ್ಕರಣೆ ಆಗಿರಲಿಲ್ಲ.  2023ರಲ್ಲಿ ಸಾರಿಗೆ ಸಿಬ್ಬಂದಿ ವೇತನ ಪರಿಷ್ಕರಣೆ ಆಗಿತ್ತು.

ಸಾರಿಗೆ ಸಿಬ್ಬಂದಿ ವೇತನ ಪರಿಷ್ಕರಣೆಯ ಆದೇಶದಲ್ಲಿ ಗೊಂದಲವಿತ್ತು. ಬಜೆಟ್ ನಲ್ಲೂ ಹಣ ಇಟ್ಟಿರಲಿಲ್ಲ.  ಈ ಬಗ್ಗೆ ಸಂಘಟನೆಗಳು ಹೋರಾಟ ನಡೆಸಿವೆ. ಸಭೆ ಮಾಡಿದ್ದೇವೆ. ಅಧಿವೇಶನ ಮುಗಿದ ನಂತರ ಸಿಎಂ ಜೊತೆ ಚರ್ಚೆ ಮಾಡುತ್ತೇವೆ ಎಂದು ಸಾರಿಗ ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.

Key words: revision, transport staff, salaries, Minister, Ramalingareddy