ಚಿತ್ರದುರ್ಗ,ಆಗಸ್ಟ್,30,2025 (www.justkannada.in): ಮೈಸೂರು ಚಾಮುಂಡೇಶ್ವರಿ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದು. ಚಾಮುಂಡಿ ದೇವಾಲಯ ಹಿಂದುಗಳಿಗೆ ಸೇರಿದ್ದು ಎಂಬುದರಲ್ಲಿ ಎರಡು ಮಾತಿಲ್ಲ ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ಚೇಷ್ಟೆ ಮಾಡದಿದ್ದರೆ ಬಿಜೆಪಿಯವರಿಗೆ ನಿದ್ದೆ ಬರುವುದಿಲ್ಲ. ಚಾಮುಂಡೇಶ್ವರಿ ಅಭಿವೃದ್ದಿ ಪ್ರಾಧಿಕಾರ ಅಧಿಕೃತ ಹೌದೋ ಅಲ್ಲವೋ ಕೋರ್ಟ್ ತಿರ್ಮಾನಿಸುತ್ತೆ. ದಸರಾ ಏಳು ಕೋಟಿ ಜನರಿಗೆ ಸೇರಿರುವಂತಹ ಹಬ್ಬ ಬಿಎಸ್ ವೈ ಕಾಲದಲ್ಲಿ ಅಬ್ದುಲ್ ಕಲಾಂರನ್ನು ಆಹ್ವಾನಿಸಿದ್ದರು ಈ ಹಿಂದೆ ನಿಸಾರ್ ಅಹ್ಮದ್ ದಸರಾ ಉದ್ಘಾಟಿಸಿದ್ದರು ಆಗ ಬಿಜೆಪಿಗರು ಕುಂಕುಮ ಹಚ್ಚಿಕೊಂಡು ಬನ್ನಿ ಎಂದಿದ್ದರಾ ..? ಎಂದು ಪ್ರಶ್ನಿಸಿದರು
ಅವರವರ ಧರ್ಮ ಅವರಿಗೆ ಶ್ರೇಷ್ಠ ಯಾವುದೇ ಧರ್ಮವನ್ನು ಯಾರೂ ದ್ವೇಷಿಸಬಾರದು ಮತಕ್ಕಾಗಿ ಬಿಜೆಪಿಯವರು ಏನು ಬೇಕಾದರೂ ಮಾಡುತ್ತಾರೆ. ಬಿಜೆಪಿಯವರಿಗೆ ಜನ ನೆಮ್ಮದಿಯಿಂದ ಇರುವುದು ಬೇಕಾಗಿಲ್ಲ ಬೆಂಕಿ ಹಚ್ಚಿ ಬೇಳೇಕಾಳು ಬೇಯಿಸಿಕೊಳ್ಳುವ ಕೆಲಸ ಮಾಡುತ್ತಾರೆ. ಈಗಾಗಲೇ ಬಾನು ಮುಷ್ತಾಕ್ ರಿಂದ ದಸರಾ ಉದ್ಘಾಟಿಸಲು ನಿರ್ಧಾರ ಮಾಡಲಾಗಿದೆ ಎಂದರು.
Key words: no doubt, Chamundi Temple , Hindus, Minister, Ramalingareddy