ಸಾರಿಗೆ ನೌಕರರ ಮುಷ್ಕರ : ಜನರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ- ಸಚಿವ ರಾಮಲಿಂಗರೆಡ್ಡಿ

ಬೆಂಗಳೂರು,ಆಗಸ್ಟ್,5,2025 (www.justkannada.in):  ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಂಡಿರುವ ಹಿನ್ನೆಲೆಯಲ್ಲಿ ಜನರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡಿದ್ದೇವೆ ಎಂದು ಸಾರಿಗೆ ಸಚಿವ ಸಚಿವ ರಾಮಲಿಂಗರೆಡ್ಡಿ ಹೇಳಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ಕೋರ್ಟ್ ಗಿಂತ ಯಾರೂ ದೊಡ್ಡವರಲ್ಲ . ಕೋರ್ಟ್ ಆದೇಶ ಬರಲಿ. ಸರ್ಕಾರ ಅದಕ್ಕೆ ಬದ್ದವಾಗಿರುತ್ತದೆ. ಸಂಘಟನೆಯವರೂ ಕೂಡ ಕೋರ್ಟ್ ಆದೇಶಕ್ಕೆ ಬದ್ದರಾಗಿರಬೇಕು  38 ತಿಂಗಳ ಹಿಂಬಾಕಿ ಕೇಳುತ್ತಿದ್ದಾರೆ . ಅದು ಹಿಂದನ ಸರ್ಕಾರದ ಆದೇಶ.  14 ತಿಂಗಳ ಹಣ ನೀಡುವುದಕ್ಕೇ ಸಿಎಂ ಸಿದ್ದರಿದ್ದಾರೆ. ಆದರೂ ಮುಷ್ಕರಕ್ಕೆ ಮುಂದಾಗಿದ್ದಾರೆ. ಸಂಘಟನೆಯವರು ಮೊದಲೇ ಕೋರ್ಟ್ ಮೊರೆ ಹೋಗೇಕಿತ್ತು ಎಂದರು.

ಸಾರಿಗೆ ನೌಕರರ ಮುಷ್ಕರಿಂದ ಜನರಿಗೆ ಅನಾನುಕೂಲವಾಗದಂತೆ ಪರ್ಯಾಯ ವ್ಯವಸ್ಥೆ ಮಾಡಿದ್ದೇವೆ ಎಂದು ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.

Key words: Transport, workers,  strike, Minister, Ramalingareddy