ಎರಡುವರೆ ವರ್ಷ ಬಳಿಕ ಕ್ಯಾಬಿನೆಟ್ ಬದಲಾವಣೆ ಎಂಬ ಅಶೋಕ್​ ಪಟ್ಟಣ್​ ಹೇಳಿಕೆ ಸಮರ್ಥಿಸಿಕೊಂಡ ಸಚಿವ ರಾಮಲಿಂಗಾ ರೆಡ್ಡಿ

ಬೆಂಗಳೂರು, ಅಕ್ಟೋಬರ್,21,2023(www.justkannada.in): ಎರಡೂವರೆ ವರ್ಷದ ಬಳಿಕ  ಕ್ಯಾಬಿನೆಟ್ ಬದಲಾವಣೆಯಾಗುತ್ತದೆ. ಎಲ್ಲಾ ಸಚಿವರು ರಾಜೀನಾಮೆ ನೀಡುವಂತೆ ರಣದೀಪ್ ಸಿಂಗ್ ಸುರ್ಜೇವಾಲ ಸೂಚಿಸಿದ್ದಾರೆ ಎಂಬ ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಹೇಳಿಕೆಯನ್ನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ರಾಮಲಿಂಗಾರೆಡ್ಡಿ, ಅನೇಕ ಹಿರಿಯದ್ದಾರೆ, ಐದಾರು ಟರ್ಮ್ ಗೆದ್ದವರು ಇದ್ದಾರೆ. ಅವರಿಗೆಲ್ಲ ಅವಕಾಶ ಕೊಡಬೇಕು ಅಂತ ಹೇಳಿದ್ದಾರೆ. ಅಶೋಕ್ ಹೇಳಿಕೆ ಬಗ್ಗೆ ತಪ್ಪೇನು ಇಲ್ಲ ಅನ್ನಿಸುತ್ತೆ ಎಂದು ಹೇಳಿದರು.

Key words: Minister -Ramalinga Reddy –defended- Ashok Pattan’s- statement