ಬೆಂಗಳೂರು,ಮಾರ್ಚ್,13,2026 (www.justkannada.in): ಮಾರ್ಚ್ 16 ರಂದು ಸಚಿವರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟವೇರ್ಪಡಿಸಿರುವ ವಿಚಾರ ಕುರಿತು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ರಾಮಲಿಂಗರೆಡ್ಡಿ, ಸೋಮವಾರ 7.30ಕ್ಕೆ ಸಿಎಂ ಸಿದ್ದರಾಮಯ್ಯ ಸಭೆ ಕರೆದಿದ್ದಾರೆ. ಸಚಿವರು, ಪಕ್ಷದ ಶಾಸಕರನ್ನ ಆಗಾಗ್ಗೆ ಕರೆದು ಮಾತನಾಡಿಸುತ್ತಾರೆ. ಈಗ ಕರೆದಿರೋದು 16 ಸಚಿವರನ್ನ ಮಾತ್ರ. ನನ್ನನ್ನೂ ಕರೆದಿದ್ದಾರೆ. ಇನ್ನೂ ಬೇರೆಯವರನ್ನಕರೆಯುತ್ತಾರೋ ಇಲ್ಲವೋ ಗೊತ್ತಿಲ್ಲ ಎಂದರು.
ಹಿರಿಯ ಶಾಸಕರ ಸಭೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ರಾಮಲಿಂಗರೆಡ್ಡಿ, ಮಂತ್ರಿಗಳಾಗಬೇಕೆಂದು ಅವರಿಗೂ ಆಸೆ ಇರುತ್ತಲ್ವೆ. 2.5 ವರ್ಷ ಆದ ಮೇಲೆ ಸಚಿವ ಸ್ಥಾನ ಸಿಗಬಹುದು ಅಂದುಕೊಂಡಿದ್ದರು ಮೂರ್ನಾಲ್ಕು ತಿಂಗಳು ವಿಳಂಬ ಆಗಿದೆಯಲ್ಲ. ಅದಕ್ಕೆ ಸಭೆ ಕರೆದಿದ್ದಾರೆ. ಸಂಪುಟ ಪುನರಾಚನೆ ಪಕ್ಷದ ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದರು.
Key words: CM, Dinner, meeting, Minister, Ramalinga Reddy







