Saturday, August 15, 2026

BDA Apartments

Home Front Page ನೂರಕ್ಕೆ ನೂರು ಉಮೇಶ್ ಮೇಟಿ ಗೆಲ್ಲೋದು ಖಚಿತ- ಸಚಿವ ಆರ್.ಬಿ ತಿಮ್ಮಾಪುರ

ನೂರಕ್ಕೆ ನೂರು ಉಮೇಶ್ ಮೇಟಿ ಗೆಲ್ಲೋದು ಖಚಿತ- ಸಚಿವ ಆರ್.ಬಿ ತಿಮ್ಮಾಪುರ

ಬಾಗಲಕೋಟೆ,ಮಾರ್ಚ್,25,2026 (www.justkannada.in): ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯಲ್ಲಿ ನೂರಕ್ಕೆ ನೂರು ಉಮೇಶ್ ಮೇಟಿ ಗೆಲ್ಲೋದು ಖಚಿತ ಎಂದು ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ತಿಳಿಸಿದರು.

ಇಂದು ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಪರ ಪ್ರಚಾರ ಮಾಡಿ ಮಾತನಾಡಿದ ಸಚಿವ ಆರ್.ಬಿ ತಿಮ್ಮಾಪುರ, ಉಮೇಶ್ ಪರ ಉತ್ತಮ ಸ್ಪಂದನೆ ಸಿಗುತ್ತಿದೆ. ರಾಜ್ಯ ಸರ್ಕಾರದ  ಅಭಿವೃದ್ದಿ ಕೆಲಸಗಳು ನಮಗೆ ನೆರವಾಗಲಿವೆ. ಹೆಚ್ ವೈ ಮೇಟಿ ಮಾಡಿರುವ ಅಭಿವೃದ್ದಿ ಕೆಲಸಗಳು ಆಸರೆ ಆಗಲಿದೆ  ನಗರ ಗ್ರಾಮೀಣ ಭಾಗದ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ ಎಂದರು.

ನಮ್ಮ ಅಭ್ಯರ್ಥಿ ಈಗಾಗಲೇ ಗೆದ್ದಾಗಿದೆ. ನೂರಕ್ಕೆ ನೂರು ನಮ್ಮ ಅಭ್ಯರ್ಥಿ ಉಮೇಶ್ ಮೇಟಿ ಗೆಲ್ಲೊದು ಖಚಿತ  ಎಂದು ಸಚಿವ ಆರ್.ಬಿ  ತಿಮ್ಮಾಪುರ ವಿಶ್ವಾಸ ವ್ಯಕ್ತಪಡಿಸಿದರು.

Key words: Umesh Meti, 100%, win, Minister, R.B. Thimmapura