ಬೆಂಗಳೂರು,ಮಾರ್ಚ್,16,2026 (www.justkannada.in): ದೇಶದಲ್ಲಿ ಉಂಟಾಗಿರುವ ಗ್ಯಾಸ್ ಸಿಲಿಂಡರ್ ವ್ಯತ್ಯಯಕ್ಕೆ ಕೇಂದ್ರ ಸರ್ಕಾರವೇ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಕಣ್ಣು ಮುಚ್ಚಿಕೊಂಡು ಏನು ಆಗುತ್ತಿಲ್ಲ ಅಂದರೆ ಪರಿಹಾರ ಇಲ್ಲ. ಇದು ಕಾಂಗ್ರೆಸ್ ಸೃಷ್ಠಿಸುವ ಆತಂಕ ಅಂದರೆ ಪರಿಹಾರ ಸಿಗಲ್ಲ. ಗ್ಯಾಸ್ ಸಮಸ್ಯೆಯಿಂದ ಎಷ್ಟೋ ದೇಗುಲಗಳಲ್ಲಿ ದಾಸೋಹ ನಿಂತಿದೆ ಪ್ರಧಾನಿ ಕ್ಷೇತ್ರ ವಾರಣಾಸಿಯಲ್ಲೂ ದಾಸೋಹ ನಿಂತಿದೆ. ಆಟೋ ಚಾಲಕರು ಗಿಗ್ ವರ್ಕರ್ಸ್ ಗೆ ತೊಂದರೆಯಾಗುತ್ತಿದೆ ಹೋಟೆಲ್ ಗಳನ್ನು ಮುಚ್ಚುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಬರೀ ಮನ್ ಕೀ ಬಾತ್ ಹೇಳುವುದಕ್ಕೆ ಇರುವುದಾ. ವಾಣಿಜ್ಯ ವಲಯದಲ್ಲಿ ಇರುವ ಆತಂಕಕ್ಕೆ ಪರಿಹಾರ ನೀಡಬೇಕು. ಈ ಬಗ್ಗೆ ಕೇಳಿದರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಉಡಾಫೆ ಉತ್ತರ ನೀಡುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.
Key words: Central government, gas cylinder, shortage, Minister, Priyank Kharge







