ಕಲಬುರಗಿ,ಜನವರಿ,10,2026 (www.justkannada.in): ಎಸ್ ಸಿ ಒಳ ಮೀಸಲಾತಿ ಮಸೂದೆಯನ್ನ ರಾಜ್ಯಪಾಲರು ವಾಪಸ್ ಕಳಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ, ಒಳ ಮೀಸಲಾತಿ ಬಿಲ್ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಎಸ್ ಸಿ ಒಳಮೀಸಲಾತಿ ಮಸೂದೆ ಬಗ್ಗೆ ಏನಾದರೂ ಸ್ಪಷ್ಟನೆ ಕೇಳಿದ್ದರೇ ಹೇಳುತ್ತಿದ್ದವು. ರಾಜಕೀಯ ಉದ್ದೇಶಕ್ಕೆ ತಿರಸ್ಕಾರ ಮಾಡಿದರೆ ಏನು ಮಾಡೋಣ. ಸದನದಲ್ಲಿ ಮೀಸಲಾತಿ ಮಸೂದೆ ಬಗ್ಗೆ ಚರ್ಚೆ ವೇಳೆ ಬಿಜೆಪಿ ಸುಮ್ಮನಿತ್ತು. ಈಗ ಈ ವಿಚಾರದಲ್ಲಿ ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿದ್ದಾರೆ ಬಿಜೆಪಿ ಇರೋದು ಮೀಸಲಾತಿ ಮುಗಿಸೋಕೆ ಎಂದು ಕಿಡಿಕಾರಿದರು.
ದ್ವೇಷ ಭಾಷಣ ತಡೆ ಮಸೂದೆಯನ್ನ ಪೆಂಡಿಂಗ್ ಇಡಬಾರದು. ಬಿಜೆಪಿಯವರ ಮಾತು ಕೇಳಿ ಪೆಂಡಿಂಗ್ ಇಡೋ ಕೆಲಸ ಆಗಬಾರದು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
Key words: BJP, politics, Internal Reservation Bill, Minister, Priyank Kharge







