ಸಿಎಂ ಸ್ಪಷ್ಟನೆ ಕೊಟ್ಟ ಮೇಲೆ ನಮ್ಮನ್ನ ಕೇಳಿ ಏನು ಪ್ರಯೋಜನ? ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು,ಜನವರಿ,7,2026 (www.justkannada.in):  ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ. ಸಿಎಂ ಸ್ಪಷ್ಟನೆ ಕೊಟ್ಟ ಮೇಲೆ ನಮ್ಮನ್ನ ಕೇಳಿ ಏನು ಪ್ರಯೋಜನ? ಎಂದು ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಎಂದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಯಾರನ್ನು ಸಿಎಂ ಮಾಡಬೇಕು ಎಂದು ಹೈಕಮಾಂಡ್ ತೀರ್ಮಾನ ಮಾಡುತ್ತದೆ.  ಎಲ್ಲಾ ಸಮುದಾಯಗಳನ್ನ ಒಟ್ಟಿಗೆ ಕೊಂಡೊಯ್ಯುವ ಪಕ್ಷ ಕಾಂಗ್ರೆಸ್. ನಾಯಕತ್ವ ಪ್ರಗತಿ ಎರಡು ನಿಂತ ನೀರಲ್ಲ.  ಆಗ ದೇವರಾಜ ಅರಸು ಇದ್ರು.  ಈಗ ಸಿದ್ದರಾಮಯ್ಯ ಇಲ್ವಾ?  ನೆಹರು ಗಾಂಧಿ ತತ್ವವನ್ನು ರಾಹುಲ್ ಗಾಂಧಿ ಮುಂದುವರೆಸುತ್ತಿಲ್ಲವಾ? ಎಂದರು.

ಮುಂದಿನ ಪೀಳಿಗೆಗೆ ನಾಯಕತ್ವವನ್ನು ಬೆಳೆಸುತ್ತಾ ಹೋಗಬೇಕು. ನಾವೆಲ್ಲರೂ ಕಾರ್ಯಕರ್ತರಿಂದಲೇ ಇದ್ದೇವೆ  ಕಾರ್ಯಕರ್ತರು ಇಲ್ಲದಿದ್ದರೆ ನನ್ನ ನಾಯಕತ್ವ ಕೂಡ ಇರಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ನುಡಿದರು.

Key words: CM, clarification, Minister, Priyank Kharge