ಬೆಂಗಳೂರು,ಅಕ್ಟೋಬರ್,17,2025 (www.justkannada.in): ನನ್ನ ಕ್ಷೇತ್ರದಲ್ಲಿ ಪಥ ಸಂಚಲನ ಮಾಡ್ತಾರಾ ಮಾಡಲಿ. ಬಿಜೆಪಿ ನಾಯಕರ ಮಕ್ಕಳು ಗಣವೇಷದಲ್ಲಿ ಬರಲಿ. ನಾನೇ ಸ್ವಾಗತ ಮಾಡುತ್ತೇನೆ ಎಂದು ಬಿಜೆಪಿಗೆ ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್ ಕೊಟ್ಟಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಸಾರ್ವಜನಿಕ ಸ್ಥಳಗಳಲ್ಲಿ ಆರ್ ಎಸ್ ಎಸ್ ಸೇರಿ ಖಾಸಗಿ ಸಂಸ್ಥೆ, ಸಂಘಟನೆಗಳ ನಿರ್ಬಂಧಕ್ಕೆ ಕಾನೂನು ತರೋಕೆ ನಿರ್ಧಾರ ಮಾಡಲಾಗಿದೆ. ನಾವು ತರುತ್ತಿರುವ ಕಾನೂನು ಬಹಳ ಸ್ಪಷ್ಟವಾಗಿದೆ ನಿಮಗೆ ಇಷ್ಟ ಇಲ್ಲ ಅಂದರೆ ಪಾಲನೆ ಮಾಡಬೇಡಿ ಎಂದರು.
ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಘಟನೆಗಳು ಸಭೆ ಮಾಡಬಾರದು . ನಾವು ಮಾಡಿರೋ ಕಾನೂನು ಪಾಲನೆ ಮಾಡಿ. ನನ್ನ ಕ್ಷೇತ್ರದಲ್ಲಿ ಪಥ ಸಂಚಲನ ಮಾಡಲಿ. ಬಿಜೆಪಿ ನಾಯಕರ ಮಕ್ಕಳು ಗಣವೇಶದಲ್ಲಿ ಬರಲಿ, ನಾನೇ ಸ್ವಾಗತ ಮಾಡುತ್ತೇನೆ. ನನ್ನ ವಿರುದ್ದ ನಾಲ್ಕೈದು ಬಾರಿ ಹೋರಾಟಕ್ಕೆ ಬಂದಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
Key words: RSS, BJP leaders, Minister, Priyank Kharge