ಬೆಂಗಳೂರು,ಅಕ್ಟೋಬರ್,15,2025 (www.justkannada.in): ಆರ್ ಎಸ್ ಎಸ್ ಬಗ್ಗೆ ಮಾತನಾಡಿದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಬಂದಿದ್ದು ಈ ಕುರಿತು ಅವರೇ ಬಹಿರಂಗ ಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಇಂತಹ ಬೆದರಿಕೆಗಳು ಆರ್ ಎಸ್ ಎಸ್ ಸಂಸ್ಕೃತಿ ತೋರಿಸುತ್ತವೆ. ಈ ರೀತಿಯ ಬೆದರಿಕೆ ವಿಡಿಯೋಗಳು 20 ಇವೆ . ಬಿಜೆಪಿಯವರು ದಾಖಲೆ ಕೇಳಿದ್ರು. ಈಗ ರಿಲೀಸ್ ಮಾಡಿದ್ದೇನೆ ಎಂದರು.
ದೂರು ಕೊಡುವ ಬಗ್ಗೆ ಚರ್ಚೆ ಮಾಡುತ್ತೇನೆ. ಗೃಹಸಚಿವರ ಜೊತೆಗೂ ಮಾತನಾಡುತ್ತೇನೆ. ದೂರು ಕೊಡುವುದು ಸುಲಭ ಆದರೆ ಆ ವ್ಯಕ್ತಿಗೆ ಶಿಕ್ಷೆ ಆಗುತ್ತದೆ. ಆ ಮನಸ್ಥಿತಿ ತುಂಬಿದ ಆರ್ ಎಸ್ ಎಸ್ ಗೆ ಏನು ಶಿಕ್ಷೆ ಮೊಬೈಲ್ ಸ್ವಿಚ್ ಆಫ್ ಮಾಡುವುದೇ ಪರಿಹಾರವಲ್ಲ ಇನ್ನೂ ಕೆಟ್ಟದಾಗಿ ನನಗೆ ಬೈದಿದ್ದಾರೆ. ಆದರೆ ನನ್ನ ಮರ್ಯಾದೆ ಉಳಿಸಿಕೊಳ್ಳಲು ರಿಲೀಸ್ ಮಾಡಲಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
Key words: 20 threatening, videos, complaint, Minister, Priyank Kharge