ಬೆಂಗಳೂರು,ಅಕ್ಟೋಬರ್,11,2025 (www.justkannada.in): ಬಿಜೆಪಿಯವರು ಸಾಮಾನ್ಯ ಪ್ರಜ್ಞೆ ಕಳೆದುಕೊಂಡಿದ್ದಾರೆ. ಅವರಿಗೆ ಕೇಂದ್ರದಿಂದ 1 ರೂಪಾಯಿ ತರುವ ಯೋಗ್ಯತೆ ಇಲ್ಲ ಎಂದು ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿಯವರು ಕೇಂದ್ರದಿಂದ 10 ರೂಪಾಯಿ ತರಲಿ ನೋಡೋಣ. ಅವರಿಗೆ ಸಾಮಾನ್ಯ ಜ್ಞಾನವಿಲ್ಲ. ಕೇಂದ್ರದಿಂದ 1 ರೂಪಾಯಿ ತರುವ ಯೋಗ್ಯತೆ ಇಲ್ಲ ಎಂದರು.
ಕಾಂಗ್ರೆಸ್ ಶಾಸಕ ವೀರೆಂದ್ರ ಪಪ್ಪಿ ಮೇಲೆ ಇಡಿ ದಾಳಿ ಬಿಜೆಪಿ ಟೀಕೆ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಆರ್.ಅಶೋಕ್ 100 ಕೋಟಿ ಕೊಟ್ಟಿದ್ದಾರೆ ಅಂದ್ರೆ ನೀವು ನಂಬ್ತೀರಾ? ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ದುಬೈಗೆ ಹೋಗಿ ಬರುತ್ತಾರೆ. ಅಮಿತ್ ಶಾಗೆ ಬಿಟ್ ಕಾಯಿನ್ ಕೊಟ್ಟಿದ್ದಾರೆ ಅಂದ್ರೆ ನಂಬುತ್ತೀರಾ? ಸಿಎಂ ಆಗಬೇಕು ಅಂದ್ರೆ ಸುಮ್ನೇನಾ ಕಪ್ಪ ಕೊಡಬೇಕು ಅಂತಾ ಬಿಎಸ್ ಯಡಿಯೂರಪ್ಪ ಹೇಳಿಲ್ವಾ? ಅನಂತ ಕುಮಾರ್ ಅವರ ಕಿವಿಯಲ್ಲಿ ಬಿಎಸ್ ವೈ ಹೇಳಿಲ್ವಾ? ಅಶೋಕ್, ವಿಜಯೇಂದ್ರ ಇಬ್ಬರು ದುಡ್ಡುಕೊಟ್ಟು ಅವರ ಸ್ಥಾನ ಉಳಿಸಿಕೊಂಡಿದ್ದಾರೆ ಎಂದು ನಾನೂ ಈ ರೀತಿ ಹೇಳಬಹುದು ಅಲ್ವಾ? ಇಡಿ ಯಾರ ಕೈಯಲ್ಲಿ ಇದೆ ಕೇಂದ್ರ ಗೃಹ ಸಚಿವ ಅಮಿತ್ ಶಾಂರಿಂದಲೇ ದಾಖಲೆ ತರಿಸಲಿ ಚಪಲಕ್ಕೆ ಮಾತಾಡಿ ಗಾಳಿಯಲ್ಲಿ ಗುಂಡು ಹೊಡೆಯೋದು ಅಲ್ಲ ಎಂದು ಗುಡುಗಿದರು.
Key words: Minister, Priyank Kharge, BJP