ಬೆಂಗಳೂರು,ಸೆಪ್ಟಂಬರ್,18,2025 (www.justkannada.in): 100 ಪರ್ಸೆಂಟ್ ಹೇಳುತ್ತಿದ್ದೇನೆ ಬಿಜೆಪಿಯವರೆ ಮತಗಳ್ಳತನ ಮಾಡುತ್ತಿರುವುದು. ಇದಕ್ಕೆ ನನ್ನ ಬಳಿ ಅಧಿಕೃತ ದಾಖಲೆ ಇದೆ ಎಂದು ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಈ ಕುರಿತು ಇಂದು ಮಾಧ್ಯಮದ ಜೊತೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, 100 ಪರ್ಸೆಂಟ್ ಬಿಜೆಪಿಯವರಿಂದಲೇ ಮತಗಳ್ಳತನ ಆಗುತ್ತಿದೆ. ಬಿಜೆಪಿಯವರೇ ಹೆಸರು ಡಿಲೀಟ್ ಮಾಡಿದ್ದಾರೆ. ನನ್ನ ಬಳಿ ಅಧಿಕೃತ ದಾಖಲೆ ಇದೆ. ಸಮಯ ಬಂದಾಗ ನಿಮ್ಮ ಮುಂದೆ ಇಡ್ತೀವಿ. ಸ್ವಲ್ಪ ಕಾಯಿರಿ ಎಂದರು.
2023 ಚುನಾವಣೆಗೂ ಮುನ್ನವೇ ಮತದಾರರ ಹೆಸರು ಡಿಲೀಟ್ ಆಗಿದೆ. 7250 ಮತದಾರರ ಹೆಸರು ಏಕಾಏಕಿ ಡಿಲೀಟ್ ಆಗಿತ್ತು ನಾನು ಬಿಆರ್ ಪಾಟೀಲ್ ಚುನಾವಣಾ ಆಯಗಕ್ಕೆ ದೂರು ನೀಡಿದ್ದವು. ನಾವು ಕೊಟ್ಟ ದೂರಿನ ಆಧಾರದ ಮೇಲೆ ಎಫ್ಐಆರ್ ಆಗಿತ್ತು. ಪರಶೀಲನೆ ಮಾಡಿದಾಗ 28 ಮತದಾರರಿಗೆ ಮಾತ್ರ ಮಾಹಿತಿ ಇತ್ತು ಉಳಿದ ಅರ್ಜಿದಾರರಿಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
Key words: vote rigging, BJP, official record, Minister, Priyank Kharge