ಬಿಜೆಪಿಯವರು ಕನ್ನಡಿಗರ ಪರ ದೆಹಲಿ ಚಲೋ ಮಾಡಲಿ- ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು,ಸೆಪ್ಟಂಬರ್,2,2025 (www.justkannada.in): ಬಿಜೆಪಿಯವರು ಧರ್ಮಸ್ಥಳ ಚಲೋ ಬದಲು ಕನ್ನಡಿಗರ ಪರ ದೆಹಲಿ ಚಲೋ ಮಾಡಲಿ ಎಂದು ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ  ವಾಗ್ದಾಳಿ ನಡೆಸಿದರು.

ಬಿಜೆಪಿ ಧರ್ಮಸ್ಥಳ ಚಲೋ ಬಗ್ಗೆ ಟೀಕಿಸಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿಯವರು ರಾಜಕೀಯಕ್ಕಾಗಿ ಹೀಗೆ ಮಾಡುತ್ತಿದ್ದಾರೆ. ಬಿಜೆಪಿಯದ್ದೂ ಎಲ್ಲವೂ ನಾಟಕ. ಅವರು ಕನ್ನಡಿಗರ ಪರ ದೆಹಲಿ ಚಲೋ ಮಾಡಲಿ. ರಾಜ್ಯಕ್ಕೆ ಸಿಗಬೇಕಾದ ಅನುದಾನ ಕೇಳಲಿ ಧರ್ಮಸ್ಥಳ ಚಲೋ ಮಾತ್ರವಲ್ಲ ದೆಹಲಿ ಚಲೋ ಕೂಡ ಮಾಡಲಿ ಎಂದು ಟಾಂಗ್ ಕೊಟ್ಟರು.

ಬಿಜೆಪಿಯಲ್ಲಿ  ಆರ್ ಎಸ್ ಎಸ್ ವರ್ಸಸ್  ಆರ್ ಎಸ್ ಎಸ್ ಜಗಳ ನಡೆಯುತ್ತಿದೆ . ಮಹೇಶ್ ತಿಮರೋಡಿ ಗಿರೀಶ್ ಮಟ್ಟಣ್ಣನವರ್ ಬಿಜೆಪಿಯವರು.  ಆರ್ ಎಸ್ ಎಸ್  ವಿಎಚ್ ಪಿ ಗರಡಿಯಲ್ಲಿ ತಿಮರೋಡಿ ಬೆಳೆದವರು ಮಟ್ಟಣ್ಣನವರ್ ಗುರುಮಠಕಲ್ ಕ್ಷೇತ್ರದಲ್ಲಿ  ಸ್ಪರ್ಧಿಸಿದ್ದವರು. ಬಿಜೆಪಿ ಯುವ ಮೋರ್ಚ ಅಧ್ಯಕ್ಷರಾಗಿದ್ದರು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

Key words: BJP, Delhi Chalo, Kannadigas, Minister, Priyank Kharge