ಧರ್ಮಸ್ಥಳ ಚಲೋ ಬದಲು ದೆಹಲಿ ಚಲೋ ಮಾಡಲಿ- ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್

ಬೆಂಗಳೂರು,ಸೆಪ್ಟಂಬರ್,1,2025 (www.justkannada.in): ಬಿಜೆಪಿಯವರು ನಡೆಸುತ್ತಿರುವ ಧರ್ಮಸ್ಥಳ ಚಲೋ ಬಗ್ಗೆ ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿಯವರು ಧರ್ಮಸ್ಥಳ ಚಲೋಬದಲು ದೆಹಲಿ ಚಲೋ ಮಾಡಲಿ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಲಿ ಎಂದು ಟಾಂಗ್ ಕೊಟ್ಟಿದ್ದಾರೆ.

ಧರ್ಮಸ್ಥಳ ಪ್ರಕರಣವನ್ನ ಸಿಬಿಐ , ಎನ್ ಐಎಗೆ ಕೊಡಿ ಅಂತಾರೆ.  ರಾಜ್ಯದ  74ಕೇಸ್ ಪೆಂಡಿಂಗ್ ಇವೆ. ತನಿಖೆ ಮಾಡಲು ಆಗುತ್ತಿಲ್ಲ ಕೇಸ್ ಕೊಟ್ಟರೆ ನೀವೇ ಸಂಪನ್ಮೂಲ ಕೊಡಿ ಅಂತಾರೆ. ಎನ್ ಐಎಗೆ ಕೊಡಲು ರಾಷ್ಟ್ರ ಭದ್ರತಾ ವಿಷಯಾ ಇದೆಯಾ.  ಯಾವುದಕ್ಕೆ ಆದ್ಯತೆ ನೀಡಬೇಕು  ಅಂತಾ ಬಿಜೆಪಿಗೆ ಗೊತ್ತಾಗಲ್ವಾ? ಕುರ್ಚಿ ಉಳಿಸಿಕೊಳ್ಳಲು ಧರ್ಮಸ್ಥಳ ಚಾಂಮುಂಡಿ ಬೆಟ್ಟ ಚಲೋ ಮಾಡುತ್ತಿದ್ದಾರೆ. ರಾಜ್ಯಾಧ್ಯಕ್ಷ ವಿರೋಧ ಪಕ್ಷದ ಸ್ಥಾನ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದರು.

Key words: Instead, Dharmasthala Chalo, Delhi Chalo, BJP,  Minister, Priyank Kharge