ಮನುಸ್ಮೃತಿ ನಂಬಿರುವ ಬಿಜೆಪಿಯವರಿಗೆ ಮಹಿಳೆಯರ ಮೇಲೆ ಗೌರವವಿಲ್ಲ- ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ,ಜುಲೈ,4,2025 (www.justkannada.in):  ಸಿಎಸ್  ಶಾಲನಿ ರಜನೀಶ್ ಅವರ ಬಗ್ಗೆ ಎಂಎಲ್ ಸಿ ರವಿಕುಮಾರ್ ಅವಹೇಳನ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ, ಮನುಸ್ಮೃತಿ ನಂಬಿರುವ ಬಿಜೆಪಿಯವರಿಗೆ ಮಹಿಳೆಯರ ಮೇಲೆ ಗೌರವವಿಲ್ಲ ಎಂದು ಟೀಕಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿಯವರು ಮನುಸ್ಮೃತಿ ನಂಬಿದ್ದಾರೆ. ಮನುಸ್ಮೃತಿಯಲ್ಲಿ ಮಹಿಳೆಗೆ ಯಾವ ಸ್ಥಾನವಿದೆ. ಅತ್ಯಾಚಾರ ಮಾಡಿದವರೂ ಬಿಜೆಪಿಯಲ್ಲಿದ್ದಾರೆ. ಬಿಜೆಪಿಯವರಿಗೆ ಮಹಿಳೆಯರ ಮೇಲೆ ಗೌರವವಿಲ್ಲ . ರವಿಕುಮಾರ್ ನಿಮಾನ್ಸ್ ನಲ್ಲಿರಬೇಕು ಎಂದು ಕಿಡಿಕಾರಿದರು.

ಅಧಿಕಾರಕ್ಕೆ ಬಂದರೆ ಆರ್ ಎಸ್ಎಸ್ ಬ್ಯಾನ್ ಖಚಿತ. ಆರ್ ಎಸ್ ಎಸ್  ಮೂರು ಬಾರಿ ಬ್ಯಾನ್ ಮಾಡಲಾಗಿತ್ತು. ಆದರೆ ಬ್ಯಾನ್ ತೆರವುಗೊಳಿಸಬಾರದಿತ್ತು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.vtu

Key words: BJP, no respect, women, Minister, Priyank Kharge