ಕದನ ವಿರಾಮ ಘೋಷಿಸಿದ್ದು ಯಾರು? ಜನರ ಮುಂದೆ ಮೋದಿ ಸತ್ಯ ಹೇಳಬೇಕು- ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹ

ಬೆಂಗಳೂರು,ಮೇ,13,2025 (www.justkannada.in):  ಭಾರತ- ಪಾಕಿಸ್ತಾನ ನಡುವೆ ನಡೆದ ದಾಳಿ ಪ್ರತಿದಾಳಿಯ ನಂತರ ಕದನ ವಿರಾಮ ಘೋಷಣೆಗೆ ಭಾರತ – ಪಾಕಿಸ್ತಾನ ಎರಡು ರಾಷ್ಟ್ರಗಳು  ಒಪ್ಪಿಗೆ ಸೂಚಿಸಿದ್ದು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ವಿರುದ್ದ ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ,  ಕದನ ವಿರಾಮ ಘೋಷಿಸಿದ್ದು ಅಮೆರಿಕಾನಾ? ಪ್ರಧಾನಿ ಮೋದಿನಾ ?  ಅಥವಾ ಪಾಕ್ ಮಾಡಿಸಿದ್ದಾ..? ಎಂಬುದನ್ನು ಪ್ರಧಾನಿ ಮೋದಿ ದೇಶದ ಜನರ ಮುಂದೆ ಸತ್ಯ ಹೇಳಬೇಕು. ವಿದೇಶಿ ವ್ಯಾಪಾರ ನಿಲ್ಲಿಸುವ ಟ್ರಂಪ್ ಬೆದರಿಕೆಗೆ ನಿರ್ಣಯ ಕೈಗೊಂಡರಾ ಎಂಬ ಬಗ್ಗೆ ಸತ್ಯ ಹೇಳಬೇಕು ಎಂದು ಆಗ್ರಹಿಸಿದರು.

ಮೋದಿ ಸಾಮಾಜಿಕ ಜಾಲತಾಣ ಬಳಸಿಕೊಂಡು ಯುದ್ದ ಮಾಡುತ್ತಿದ್ದಾರೆ. ಅಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಪ್ರಧಾನಿ ಮೋದಿಗೆ ಸಂಪೂರ್ಣ ಬೆಂಬಲ ನೀಡಿದ್ದವು. ಆದರೂ ಸರ್ವಪಕ್ಷ ಸಭೆ ಕರೆಯಲಿಲ್ಲ . ಮೋದಿ ಸಂಸತ್ ಅಧಿವೇಶನ ಕರೆಯಲಿಲ್ಲ.  ಅದರೆ ಪಾಕ್ ಪ್ರಧಾನಿ ಸಂಸತ್ ನಲ್ಲಿ ಯುದ್ದ ಗೆದ್ದಿದ್ದು ನಾವೇ ಅಂತಿದ್ದಾರೆ. ನಿನ್ನೆ ದೇಶ ಉದ್ದೇಶಿಸಿ  ಮಾತನಾಡಿದ ಮೋದಿ ಈ ಬಗ್ಗೆ ಹೇಳಬೇಕಿತ್ತು ಮೋದಿ ಕೇವಲ ಕೆಂಪು ಕೋಟೆ ಮೇಲೆ ಮಾತನಾಡಲು ಸೀಮಿತವಾಗಿದ್ದೀರಿ. ಪಹಲ್ಗಾಮ್ ದಾಳಿ ನಡೆಸಿದ ಉಗ್ರರು ಈಗ ಎಲ್ಲಿದ್ದಾರೆ ಹೇಳುತ್ತೀರಾ  ಉಗ್ರರು ದೇಶದ ಒಳಗಿದ್ದಾರಾ ಹೊರಗಿದ್ದಾರಾ..?  ಹೇಳಿ ಎಂದು ಹರಿಹಾಯ್ದರು.

Key words: declared, ceasefire, Modi, tell, truth, Minister, Priyank Kharge