ಸಚಿವ ಸ್ಥಾನ ಸಿಗದಿದ್ರೆ ಬಂಡಾಯ ಏಳಲ್ಲ- ಪ್ರತಾಪ್ ಗೌಡ ಪಾಟೀಲ್…

ರಾಯಚೂರು,ಜ,25,2020(www.justkannada.in):  ಎರಡು ಮೂರು ದಿನದಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಉಪಚುನಾವಣೆಯಲ್ಲಿ ಗೆದ್ದ 11 ಮಂದಿಗೆ ಮಂತ್ರಿ ಸ್ಥಾನ ನೀಡುತ್ತಾರೆ. ಆದರೆ ನಮಗೆ ಸಚಿವ ಸ್ಥಾನ ಸಿಗದಿದ್ದರೇ ಬಂಡಾಯವೇಳಲ್ಲ ಎಂದು ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ತಿಳಿಸಿದ್ದಾರೆ.

ಮಾಧ್ಯಮಗಳ ಜತೆ ಇಂದು ಮಾತನಾಡಿದ ಪ್ರತಾಪ್ ಗೌಡ ಪಾಟೀಲ್,  ನಾವು 17 ಮಂದಿಯೂ ಒಗ್ಗಟ್ಟಾಗಿದ್ದೇವೆ. ನಾವು ಬಂಡಾಯವೆದ್ದು ಒಂದು ಪಕ್ಷವನ್ನ ಬಿಟ್ಟು ಬಂದವರು. ಹೀಗಾಗಿ ಸಚಿವ ಸ್ಥಾನ ಸಿಗದಿದ್ದರೇ ಮತ್ತೆ ಬಂಡಾಯ ಏಳುಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಸೋತವರಿಗೆ ಸಚಿವ ಸ್ಥಾನ ವಿಚಾರ ಕುರಿತು ಪ್ರತಿಕ್ರಿಯಿಸಿದ ಪ್ರತಾಪ್ ಗೌಡ ಪಾಟೀಲ್, ಸೋತವರಿಗೆ ಸದ್ಯ ಸಚಿವ ಸ್ಥಾನ ಇಲ್ಲ. ಎರಡು ಮೂರು ದಿನಗಳಲ್ಲಿ ಸಂಪುಟ ವಿಸ್ತರಣೆಯಾಗಲಿದೆ. ಗೆದ್ದ 11 ಶಾಸಕರನ್ನು ಸಚಿವರನ್ನಾಗಿ ಮಾಡುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಸಿಎಂ ನೀಡಿದ್ದ ಭರವಸೆಯನ್ನು ಈಡೇರಿಸುತ್ತಾರೆ ಎನ್ನುವ ವಿಶ್ವಾಸವಿದೆ. ಪಕ್ಷದಲ್ಲಿ ಶಿಸ್ತಿದೆ. ಹೈಕಮಾಂಡ್ ಇದೆ. ಹೀಗಾಗಿ ಯಡಿಯೂರಪ್ಪನವರು ಸ್ವತಂತ್ರ್ಯವಾಗಿ ಯಾವುದೇ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

Key words: minister position-no rebellion –maski-Pratap Gowda Patil.